ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯ ಹಿಂದುತ್ವದ ಕೋಟೆಯನ್ನು ಭೇದಿಸಿದ ಪ್ರತಿಭೆ ನಳಿನ್ ಕುಮಾರ್ ಕಟೀಲ್ , ಆದರೆ ಕೊನೆಗೆ ಕಾರ್ಯಕರ್ತರಿಂದಲೇ ದೂಷಿಸಲು ಪ್ರಯತ್ನ ನಡೆದಿದ್ದು ಕೊನೆಗೂ ಟಿಕೆಟ್ ತಪ್ಪಿದರಿಂದ ಹೈ ಕಮಾಂಡ್ ಯುವ ಹಾಗೂ ವಿದ್ಯಾವಂತ ಅಭ್ಯರ್ಥಿಗೆ ಮಣೆಹಾಕಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಯುವಕಾರ್ಯಕರ್ತರಿಗೆ ಮತ್ತೊಮ್ಮೆ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಶಾಲಿಯಾಗಲು ಸುಲಭವಾಗಿದೆ.
ಈ ಬಾರಿ ಜಾತಿ ರಾಜಕೀಯದ ಬಹುಸಂಖ್ಯಾತ ಬಿಲ್ಲವ ಅಭ್ಯರ್ಥಿಗೆ ಕಾಂಗ್ರೆಸ್ ಮಣೆಹಾಕಿದ್ದು ಆದರೆ ಗೆಲುವಿನ ಅವಕಾಶ ಕಷ್ಟ ಯಾಕೆಂದರೆ ಕೇಂದ್ರ ಸರಕಾರದ ಯೋಜನೆ ಮೋದಿಯ ಜನಪ್ರಿಯತೆ ಕಾಂಗ್ರೆಸ್ ಗೆ ಕಗ್ಗಂಟಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಭದ್ರ ಕೋಟೆಯನ್ನು ಭೇದಿಸಲು ಅಷ್ಟೊಂದು ಸುಲಭವಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ .
ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಬೇಸರದಲ್ಲಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ಗೆ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಹೌದು.. ನಳಿನ್ ಕುಮಾರ್ ಕಟೀಲ್ ಅವರನ್ನು ಕೇರಳ ಲೋಕಸಭಾ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆ ತೆಲಂಗಾಣ ಮತ್ತು ಮಹಾರಾಷ್ಟ್ರ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಕರ್ನಾಟಕದ ಬಿಜೆಪಿ ನಾಯಕರುಗಳಿಗೆ ನೀಡಲಾಗಿದೆ.
ಒಟ್ಟಿನಲ್ಲಿ ಯಡಿಯೂರಪ್ಪ ಬಣ ಅಭ್ಯರ್ಥಿಗಳ ಆಯ್ಕೆಯಲ್ಲಿ ಭಿನ್ನ ಮತ ಶಮನಮಾಡುವುದರಲ್ಲಿ ಪಣತಟ್ಟಿದ್ದು ಮೋದಿ ಅಲೆ ಹಾಗೂ ಹಿಂದುತ್ವದ ಹಾದಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಎಲ್ಲಾ ಸಮೀಕ್ಷೆ ಇದ್ದು ಇದರಿಂದ ಕಾಂಗ್ರೆಸ್ ಕಂಗಾಲಾಗಿದೆ . ಏನಾದರೂ ಮಾಡಿ ದೆಹಲಿಯ ಗದ್ದುಗೆ ಪಡೆಯಲು ಹವಣಿಸುವ ರಾಹುಲ್ ಗಾಂಧಿ ಗೂ ಸೋಲು ಕಟ್ಟಿಟ್ಟ ಬುತ್ತಿ ಎಂದು ತಿಳಿದಿದೆ.


