ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರಲು ಭಾಗ್ಯಗಳೇ ಮುಖ್ಯ ಕಾರಣವೆಂಬುದು ಎಲ್ಲರಿಗೂ ತಿಳಿದ ವಿಷಯ . ಶಕ್ತಿ ಸ್ಕೀಮ್ ನಡಿ ಉಚಿತ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಯಿಂದಾಗಿ ಲಕ್ಷಾಂತರ ಮಹಿಳೆಯರು ಟಿಕೆಟ್ಗೆ ಹಣ ಖರ್ಚು ಮಾಡದೆ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಅದರಂತೆ ಜನಸಾಮನ್ಯರೇ ನಿಬ್ಬೆರಗಾಗುವಂತಹ ಘಟನೆ ನಡೆದಿದೆ.
ಕಾಡು ಉಳಿಸಿ ನಾಡು ಬೆಳೆಸಿ,ಪ್ರಾಣಿ ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿ ನೀರು ಇಟ್ಟುಬಿಡಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇಲ್ಲಿ ಇಂದು ಒಂದು ಹಾಸ್ಯಾಸ್ಪದವಾದ ವಿಚಾರವಾಗಿದೆ. ಇಂದು ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕೆಎಸ್ಆರ್ಟಿಸಿ KSRTC ಬಸ್ನಲ್ಲಿ ಘಟನೆಯೊಂದು ನಡೆದಿದೆ. ಹಾಗೂ ಈ ಘಟನೆಯಿಂದ ಕೆಲವರು ಶಾಕ್ಗೂ ಒಳಗಾಗಿದ್ದಾರೆ. ಏನೋ ಮುದ್ದಾದ ಮಕ್ಕಳಿಗೆ ಲವ್ ಬರ್ಡ್ಸ್ ಹಕ್ಕಿಗಳೆಂದರೆ ಇಷ್ಟ ಇನ್ನೇನು ರಜಾ ದಿನಗಳು ಬಂತೂ ಅದರಂತೆ ತಮ್ಮ ಜೊತೆ ಇರುವ ಮುದ್ದಾದ ಲವ್ ಬರ್ಡ್ಸ್ ಹಕ್ಕಿಯನ್ನು ಅಜ್ಜಿ ಮನೆಗೆ ಕೊಂಡೊಯ್ಯಲು ಮೊಮ್ಮಗಳು ಬಯಸಿದ್ದು ಉಚಿತ ಬಸ್ ಇರುವುದರಿಂದ ಹಕ್ಕಿ ಯನ್ನು ಊರಿಗೆ ಹೋಗಲು ನಿಶ್ಚಹಿಸಿದ್ದರು,ಆದರೆ ಬಸ್ಸು ಹತ್ತಿದ ಅಜ್ಜಿ ,ಮೊಮ್ಮಗಳಿಗೆ ಕಂಡಕ್ಟರ್ ಶಾಕ್ ಕೊಟ್ಟಿದ್ದಾನೆ. ಒಂದು ಪಕ್ಷಿಗೆ 111ರೂ. ನಂತೆ ನಾಲ್ಕು ಪಕ್ಷಿಗಳಿಗೆ 444ರೂ. ಟಿಕೆಟ್ ಕೊಟ್ಟಿದ್ದಾನೆ. ನಿಬ್ಬೆರಗಾದ ಅಜ್ಜಿ-ಮೊಮ್ಮಗಳು ಟಿಕೆಟ್ ಹಣ ನೀಡಿ ಮೈಸೂರಿಗೆ ಪ್ರಯಾಣಿಸಿದ್ದಾರೆ. ಸರ್ಕಾರದ ಫ್ರೀ ಯೋಜನೆಯಿಂದಾಗಿ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್ ಸಿಕ್ಕರೆ, ನಾಲ್ಕು ಲವ್ ಬರ್ಡ್ಸ್ ಪಕ್ಷಿಗಳಿಗೆ ಟಿಕೆಟ್ ಹಣ ಕೊಡುವಂತಾಗಿದೆ.
ಆದರೆ ಕಂಡಕ್ಟರ್ ಕೊಟ್ಟ ಟಿಕೆಟ್ನಲ್ಲಿ ನಾಲ್ಕು ಮಕ್ಕಳು ಎಂದು ಟಿಕೆಟ್ನಲ್ಲಿ ನಮೂದಿಸಲಾಗಿದ್ದು,ಈ ಫೋಟೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದ್ದು ಮೂಕ ಪಕ್ಷಿಗಳಿಗೂ ಬಿಟ್ಟಿ ಭಾಗ್ಯ ಇಲ್ಲವೆಂದು ಫೇಸ್ಬುಕ್ ಇನ್ಸ್ಟಾಗ್ರಾಮ್ ನಲ್ಲಿ ಕಾಮೆಂಟ್ ಹಾಕಿ ಕೆಲವರು ನಕ್ಕು ಸುಮ್ಮನಾದ್ರೆ, ಮತ್ತೆ ಕೆಲವರು ಹೀಗೂ ಉಂಟೇ ಎಂದು ತಲೆಗೆ ಕೈಯಿಟ್ಟುಕೊಂಡಿದ್ದಾರೆ.


