ಚಿಕ್ಕಮಗಳೂರು : ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಬಳಿ ನಡೆದಿದೆ.
ಲಾರಿ-ಬೈಕ್ ನಡುವೆ ಭೀಕರ ಅಪಘಾತದಲ್ಲಿ ಎಎಸ್ಪಿ ಗನ್ ಮ್ಯಾನ್ ಜಯಣ್ಣ ಎಂಬವರ ಸ್ಥಿತಿ ಗಂಭೀರವಾಗಿದ್ದು ಪತ್ನಿ ಸುಮಾ (25) ಮೃತ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ದಾವಣಗೆರೆಯಲ್ಲಿ ಎಎಸ್ಪಿ ಗನ್ ಮ್ಯಾನ್ ಆಗಿದ್ದ ಕಡೂರು ತಾಲೂಕಿನ ತಂಗಲಿ ಮೂಲದ ಜಯಣ್ಣ ಪತ್ನಿ ಜೊತೆ ಬೈಕಿನಲ್ಲಿ ರೈಲ್ವೆ ಸ್ಟೇಷನ್ ಗೆ ಹೋಗುವಾಗ ಅಪಘಾತ ಸಂಭವಿಸಿದೆ. ಒನ್ ವೇ ನಲ್ಲಿ ಅಡ್ಡಾದಿಡ್ಡಿ ಬಂದ ಲಾರಿ ಚಾಲಕ ಡ್ಯೂಟಿಗೆ ಹೋಗಲು ಪತ್ನಿ ಜೊತೆ ದಾವಣಗೆರೆಗೆ ಹೊರಟಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪೇದೆ ಜಯಣ್ಣ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.


