Friday, March 13, 2026
Flats for sale
Homeಜಿಲ್ಲೆಮಂಗಳೂರು ; ಬಪ್ಪನಾಡು ದೇವಸ್ಥಾನದ ಜಾತ್ರೆಯಲ್ಲಿ ಮತ್ತೆ ಧರ್ಮ ದಂಗಲ್ : ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ...

ಮಂಗಳೂರು ; ಬಪ್ಪನಾಡು ದೇವಸ್ಥಾನದ ಜಾತ್ರೆಯಲ್ಲಿ ಮತ್ತೆ ಧರ್ಮ ದಂಗಲ್ : ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದೆಂದು ಆಗ್ರಹ.

ಮಂಗಳೂರು ; ಮಂಗಳೂರಿನಲ್ಲಿ ಜನವರಿ ತಿಂಗಳು ಬಂತೆಂದರೆ ಧಾರ್ಮಿಕ ಹಾಗೂ ಜಾತ್ರಾ ಮಹೋತ್ಸವ ಯಕ್ಷಗಾನ,ಇನ್ನಿತರ ಕಾರ್ಯಕ್ರಮಗಳು ಪ್ರಾರಂಭವಾಗುವುದು ಸಹಜ. ಇದೀಗ ಮತ್ತೆ ಜಾತ್ರೆಯಲ್ಲಿ ಧರ್ಮ ದಂಗಲ್ ಶುರುವಾಗಿದೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂಬ ಕೂಗು ಕೇಳಿ ಬಂದಿದೆ.

ಮುಲ್ಕಿ ನದಿಯ ಪ್ರವಾಹದಲ್ಲಿ ದೇವಸ್ಥಾನವು ನಶಿಸಿತ್ತು.ಆ ಸಂದರ್ಭದಲ್ಲಿ ಬಪ್ಪ ಬ್ಯಾರಿ ಎಂಬ ಕೇರಳ ವ್ಯಾಪಾರಿಯು ದೇವಸ್ಥಾನವನ್ನು ಕಟ್ಟಿದರು ಎಂದು ಹೇಳಲಾಗುತ್ತೆ. ಇದು ದೇವಿಯ ಮಹಿಮೆಯನ್ನು ತಿಳಿಸುತ್ತದೆ. ಒಂದು ದಿನ ಬಪ್ಪ ಬ್ಯಾರಿ ಹಡಗು ಆ ಲಿಂಗಗಳಿಗೆ ಡಿಕ್ಕಿ ಹೊಡೆಯಿತು. ಆದರೆ 5 ಲಿಂಗಗಳ ಪೀಠಕ್ಕೆ ಯಾವುದೇ ಹಾನಿಯಾಗಿರಲಿಲ್ಲ.ಆಗ ಅವನಿಗೆ ದುರ್ಗಾದೇವಿಯು ಕನಸಿನಲ್ಲಿ ಬಂದು ಆ ಲಿಂಗಗಳಿಗೆ ದೇವಸ್ಥಾನವನ್ನು ಕಟ್ಟಲು ಹೇಳಿದಂತಾಯಿತು. ಆ 5 ಲಿಂಗಗಳು ಯಾವುವೆಂದರೆ ಮೂಲ ದುರ್ಗ, ಅಗ್ನಿ ದುರ್ಗ, ಜಲದುರ್ಗ, ವನದುರ್ಗ, ಆಗ್ರಾದುರ್ಗ ಇವೆಲ್ಲವುಗಳು ಒಂದೇ ಪಾಣಿಪೀಠದಲ್ಲಿ ಸ್ಥಾಪಿಸಿದ್ದಾರೆ. ಆದ್ದರಿಂದ ಈ ಸ್ಥಳವನ್ನು ಬಪ್ಪ ಎಂದು ಕರೆಯುತ್ತಾರೆ ಎಂಬುದು ಚರಿತ್ರೆ.

ಇನ್ನೇನು ಜಾತ್ರೆ ಆರಂಭವಾಗುವ ಸಮಯ ಈ ಬಗ್ಗೆ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಜಯರಾಮ್ ಶೆಟ್ಟಿಗಾರ್ ಎಂಬುವವರು ದೇವಸ್ಥಾನದ 150 ಮೀ ವ್ಯಾಪ್ತಿಯೊಳಗೆ ಅನ್ಯಮತೀಯ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಹಾಗೂ ದೇವಸ್ಥಾನದ ವಠಾರದಲ್ಲಿ ಹಿಂದುಗಳೇ ವ್ಯಾಪಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.ಕಳೆದ ವರ್ಷಬ್ಯಾನರ್ ಮೂಲಕ ಬಪ್ಪನಾಡುವಿನ ವ್ಯಾಪಾರ ಧರ್ಮ ದಂಗಲ್ ಸದ್ದು ಮಾಡಿತ್ತು.

ಕಳೆದ 2-3 ವರ್ಷಗಳಿಂದ ಇಲ್ಲಿ ಧರ್ಮ ದಂಗಲ್ ನಡೆಯುತ್ತಿದ್ದು ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳೋತೆ ಎಂಬುದನ್ನು ಕಾದುನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular