Thursday, July 23, 2026
Homeಜಿಲ್ಲೆತುಮಕೂರು : ರಾತ್ರೋರಾತ್ರಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪಾಪಿಗಳು ,ಸುಟ್ಟ ಸ್ಥಿತಿಯಲ್ಲಿ ಮೂವರ...

ತುಮಕೂರು : ರಾತ್ರೋರಾತ್ರಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪಾಪಿಗಳು ,ಸುಟ್ಟ ಸ್ಥಿತಿಯಲ್ಲಿ ಮೂವರ ಮೃತದೇಹಗಳು ಪತ್ತೆ‌.

ತುಮಕೂರು : ಕಾರಿಗೆ ಬೆಂಕಿ ಹಚ್ಚಿ ನಂತರ ಕೆರೆಗೆ ತಳ್ಳಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿರುವ ಭಯಾನಕ ಘಟನೆ ತಾಲೂಕಿನ ಕುಚ್ಚಂಗಿ ಕೆರೆ ಬಳಿ ನಡೆದಿದೆ. ಬೆಳ್ತಂಗಡಿಯಿಂದ ಬಾಡಿಗೆಗೆ ಕಾರನ್ನು ಪಡೆದು ಮೂವರು ವ್ಯಕ್ತಿಗಳು ತುಮಕೂರಿಗೆ ಪ್ರಯಾಣಿಸಿದ್ದಾರೆ.ಕಾರು ಯಾರು ಸುಟ್ಟು ಹಾಕಿದರೆಂಬುದು ಇನ್ನು ತಿಳಿಯಬೇಕಾಗಿದೆ.

ಶುಕ್ರವಾರ, ಮಾರ್ಚ್ 22 ರಂದು, ರಫೀಕ್ ಹೆಸರಿನಲ್ಲಿ ನೋಂದಾಯಿಸಲಾದ ಕೆಎ 43 ನೋಂದಣಿ ಸಂಖ್ಯೆಯ ಎಸ್ಪ್ರೆಸೊ ಕಾರಿನಲ್ಲಿ ಮೂವರು ವ್ಯಕ್ತಿಗಳ ಸುಟ್ಟ ಅವಶೇಷಗಳು ಪತ್ತೆಯಾಗಿವೆ. ಮಾರುತಿ ಕಂಪನಿಯ ಎಸ್ ಪ್ರೆಸ್ ಸೊ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ತಡರಾತ್ರಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಹೋಗಿರೋ ಶಂಕೆ ವ್ಯಕ್ತವಾಗಿದೆ.

ಕೊಲೆಯಾದವರು ತಾಲೂಕಿನ ನಡ ಗ್ರಾಮದ ಟಿಬಿ ಕ್ರಾಸ್ ನಿವಾಸಿ ಸಾಹುಲ್ (45), ಕುವೆಟ್ಟು ಗ್ರಾಮದ ಮಡಕಡ ನಿವಾಸಿ ಇಸಾಕ್ (56), ಶಿರ್ಲಾಲ್ ಗ್ರಾಮದ ಇಮ್ತಿಯಾಜ್ (34) ಎಂದು ತಿಳಿದುಬಂದಿದೆ.

ಕಾರಿನಲ್ಲಿ ಐವರು ಇದ್ದರು ಎಂದು ವರದಿಯಾಗಿದ್ದು, ಇಬ್ಬರು ಸದ್ಯಕ್ಕೆ ಪತ್ತೆಯಾಗಿಲ್ಲ.

ಈ ಗುಂಪಿನ ತುಮಕೂರಿಗೆ ಪ್ರಯಾಣದ ಹಿಂದಿನ ಉದ್ದೇಶವು ಈ ಹಂತದಲ್ಲಿ ಅಸ್ಪಷ್ಟವಾಗಿದೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಆತಂಕಕಾರಿ ಘಟನೆಗೆ ಸಂಬಂಧಿಸಿದಂತೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ಅಶೋಕ್ ಕೆವಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular