Friday, March 13, 2026
Flats for sale
Homeರಾಜಕೀಯರಿಪ್ಪನ್‌ಪೇಟೆ :"ಹೆದ್ದಾರಿಪಕ್ಕದ ಬೃಂದಾವನ ಕ್ಯಾಂಟೀನ್‌ನಲ್ಲಿ ಮಂಡಕ್ಕಿ ಬಿಸಿಬಿಸಿ ಬೋಂಡಾ ಸವಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್’’.

ರಿಪ್ಪನ್‌ಪೇಟೆ :”ಹೆದ್ದಾರಿಪಕ್ಕದ ಬೃಂದಾವನ ಕ್ಯಾಂಟೀನ್‌ನಲ್ಲಿ ಮಂಡಕ್ಕಿ ಬಿಸಿಬಿಸಿ ಬೋಂಡಾ ಸವಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್’’.

ರಿಪ್ಪನ್‌ಪೇಟೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಕಲ್ಲೂರು ಬೈಂದೂರು ತೆರಳುವ ಮಾರ್ಗದ ರಿಪ್ಪನ್‌ಪೇಟೆಯ ರಾಜ್ಯ ಹೆದ್ದಾರಿ ಪಕ್ಕದ ಬೃಂದಾವನ ಕ್ಯಾಂಟೀನ್‌ನಲ್ಲಿ ಲೋಕಸಭಾ ಕ್ಷೇತ್ರದ ಆಭ್ಯರ್ಥಿ ಗೀತಾ ಮತ್ತು ರಾಜ್ಯ ಶಿಕ್ಷಣ ಸಚಿವ ಮಧುಬಂಗಾರಪ್ಪ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಾಸಕ ಗೋಪಾಲಕೃಷ್ಣಬೇಳೂರರನ್ನು ಆಭಿಮಾನಿಗಳ ಕಾರ್ಯಕರ್ತರ ಸ್ವಾಗತಿಸಿ ಬರಮಾಡಿಕೊಂಡರು.

ಬೃಂದಾವನ ಕ್ಯಾಂಟೀನ್ ಬಿಸಿ ಬಿಸಿ ಮೆಣಸಿನಕಾಯಿ ಬೋಂಡಾ ಮಂಡಕ್ಕಿಯನ್ನು ಸವಿದು ಆಭಿಮಾನಿ ಕಾರ್ಯಕರ್ತರನ್ನು ಹುರಿದುಂಬಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಧುಬಂಗಾರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಈ ಭಾರಿಯ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಗೆಲುವು ನಿಶ್ಚಿತವೆಂದು ಭವಿಷ್ಯ ನುಡಿದ ಅವರು ಈಗಾಗಲೇ ರಾಜ್ಯ ಸರ್ಕಾರದದ ಗ್ಯಾರಂಟಿ ಯೋಜನೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಿಂದ ಮತದಾರರು ಕಾಂಗ್ರೆಸ್ ಕಡೆ ಹಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆಂಬ ಬಗ್ಗೆ ಭಾವನಾತ್ಮಕ ಅಭಿಪ್ರಾಯ ಕಂಡು ಬರುತ್ತಿದ್ದು ಹಸಿದವರ ಬಗ್ಗೆ ಕಾಂಗ್ರೆಸ್ ಸದಾ ಸ್ಪಂದಿಸುತ್ತಿದೆ ಆದರೆ ಅಡಳಿತದಲ್ಲಿರುವ ಕೇಂದ್ರ ಮೋದಿ ಸರ್ಕಾರದಿಂದ ನಾವು ಮೋಸ ಹೋಗಿದ್ದು ಈ ದೇಶವನ್ನು ಸಂವೃದ್ದ ದೇಶವನ್ನಾಗಿ ಮತ್ತು ಶಾಂತಿ ಸಾಮರಸ್ಯದಿಂದರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಜಾತಿಯ ವಿಷ ಬೀಜ ಬಿತ್ತಿ ಗೊಂದಲ ಸೃಷ್ಠಿಸುವ ಕೋಮುವಾದಿ ಪಕ್ಷವನ್ನು ದೂರವಿಡಲು ಮತದಾರರು ಉತ್ಸುಕರಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕೂ ಆಧಿಕಾ ಸ್ಥಾನ ಗಳಿಸುವುದೆಂದು ಹೇಳಿ ಕೇಂದ್ರದಲ್ಲಿ 360 ಕ್ಕೂ ಆಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು,ಹ್ಯಾಟ್ರಿಕ್ ಹೀರೋ ಚಿತ್ರನಟ ಶಿವರಾಜ್,ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷಿö್ಮ, ಗ್ರಾಮ ಪಂಚಾಯ್ತಿ ಸದಸ್ಯ ಡಿ.ಈ.ಮಧುಸೂದನ್,ಮಂಜುನಾಥ ಮಳವಳ್ಳಿ, ಬಂಡಿ ರಾಮಚಂದ್ರ, ಲೇಖನ, ರವೀಂದ್ರ,ಬೃAದಾವನ ಕ್ಯಾಂಟೀನ್ ಸ್ವಾಮಿನಾಯ್ಕ್, ಕೆರೆಹಳ್ಳಿ, ರಮೇಶ್‌ಪ್ಯಾನ್ಸಿ, ಹೆಚ್.ಎನ್.ಉಮೇಶ್, ಗಣಪತಿಗವಟೂರು,ಪ್ರಕಾಶಪಾಲೇಕರ್,ಅಶೀಫ್‌ಭಾಷಾ,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular