Thursday, July 23, 2026
Homeರಾಜ್ಯಚಿಕ್ಕಮಗಳೂರು : ಮೇಯ್ತಿದ್ದ ಕುರಿಗಳನ್ನು ಒತ್ತೊಯ್ದ ಖದೀಮರು,ಕಾರನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು.

ಚಿಕ್ಕಮಗಳೂರು : ಮೇಯ್ತಿದ್ದ ಕುರಿಗಳನ್ನು ಒತ್ತೊಯ್ದ ಖದೀಮರು,ಕಾರನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು.

ಚಿಕ್ಕಮಗಳೂರು : ಇನ್ನೇನು ಹಬ್ಬ ಗಳು ಬರ್ತಾ ಇದೆ ಅದೇ ಸಂದರ್ಭದಲ್ಲಿ ಅತಿಆಶೆಯಿಂದ ಮೇಯ್ತಿದ್ದ ಕುರಿಗಳನ್ನು ಕಾರಲ್ಲಿ ತುಂಬಿಸಿ ಒತ್ತೊಯ್ದ ಘಟನೆ ಮೂಡಿಗೆರೆ ತಾಲೂಕ್ ಕೊಟ್ಟಿಗೆಹಾರದ ಅತ್ತಿಗೆರೆ ಬಳಿ ನಡೆದಿದೆ.

ಶಿವಮೊಗ್ಗ ಮೂಲದ ಭದ್ರಾವತಿಯ ಜಬೀವುಲ್ಲಾ ಮತ್ತು ಕುಟುಂಬದವರು ಕೊಟ್ಟಿಗೆಹಾರದ ಬಳಿ ಮಂಗಳವಾರ ಸಂಜೆ ಯಾರು ಇಲ್ಲದ ಸಮಯದಲ್ಲಿ ಮೇಯುತ್ತಿದ್ದ ಕುರಿಗಳನ್ನು ಕಳ್ಳತನ ಮಾಡಿ ಅಪರಿಹರಿಸಲು ಯತ್ನಿಸಿದ್ದರು,ಕಾರಿನಲ್ಲಿ ತುಂಬಿದಾಗ ಸ್ಥಳೀಯರೊಬ್ಬರು ನೋಡಿದ ಪರಿಣಾಮ ಕುರಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.ವಿಷಯ ತಿಳಿದ ಸ್ಥಳೀಯರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಆರೋಪಿ ಜಬೀವುಲ್ಲಾನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೇಯುತ್ತಿದ್ದ 5 ಕುರಿಗಳು ಮೊಹಮ್ಮದ್ ಎಂಬುವರಿಗೆ ಸೇರಿದ್ದು,ರಂಜಾನ್ ಉಪವಾಸದ ಸಂದರ್ಭದಲ್ಲಿ ಹಾಡಾಗಲೇ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಈ ಕೃತ್ಯ ಎಸಿಗಿರುವುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಣಕಲ್ ಪೊಲೀಸ್ ಠಾಣಾ ಸಬ್ ಇನ್ ಸ್ಪೆಕ್ಟರ್ ಕೌಶಿಕ್, ಪೊಲೀಸ್ ಸಿಬ್ಬಂದಿ ಜಗದೀಶ್ ಮತ್ತಿತರ ಸಿಬ್ಬಂದಿಗಳು ಭೇಟಿ ನೀಡಿ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular