Friday, March 6, 2026
Flats for sale
Homeಜಿಲ್ಲೆಮಂಗಳೂರು ; ದಕ್ಷಿಣ ಕನ್ನಡ-ಮಡಿಕೇರಿ ಜಿಲ್ಲೆಯ ಸಂಪಾಜೆಯ ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ.

ಮಂಗಳೂರು ; ದಕ್ಷಿಣ ಕನ್ನಡ-ಮಡಿಕೇರಿ ಜಿಲ್ಲೆಯ ಸಂಪಾಜೆಯ ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ.

ಮಂಗಳೂರು ; 6 ವರ್ಷದ ಬಳಿಕ ಮತ್ತೆ ಕೊಡಗಿನಲ್ಲಿ ಕೆಂಪು ಉಗ್ರರು ಪ್ರತ್ಯಕ್ಷಗೊಂಡಿದ್ದಾರೆ.ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಮಾವೋವಾದಿಗಳು ಕಾಣಿಸಿಕೊಂಡಿದ್ದಾರೆ.8 ಜನರ ನಕ್ಸಲ್ ತಂಡ ಶನಿವಾರ ಸಂಜೆ ಪ್ರತ್ಯಕ್ಷ ವಾಗಿದ್ದರೆಂದು ತಿಳಿದು ಬಂದಿದೆ.

ಕೂಜಿಮಲೆ ಅಂಗಡಿಯೊಂದರಿಂದ ನಗದು ನೀಡಿ 4 ಸಾವಿರ ರೂಪಾಯಿಯಷ್ಟು ದಿನಸಿ ಕರಿದಿಸಿದ ಘಟನೆ ಕಾಲೂರು ಗ್ರಾಮದ ಗಡಿ ಗ್ರಾಮ ಕೂಜಿಮಲೆ ಬಳಿ ನಡೆದಿದೆ . ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಗುತ್ತಿಗಾರು, ಕೊಲ್ಲಮೊಗರು, ಕಲ್ಮಕರ್, ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಆಗಿದ್ದು ಇದು ದಕ್ಷಿಣ ಕನ್ನಡ-ಮಡಿಕೇರಿಯಾ ಗಡಿಭಾಗವಾಗಿದೆ.

2012 ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿದ್ದು ಬಳಿಕ 2018 ರಲ್ಲೂ ಫೆಬ್ರವರಿ ತಿಂಗಳಿನಲ್ಲಿ ಇದೆ ವ್ಯಾಪ್ತಿ ಸಂಪಾಜೆ ಗುಡ್ಡೆಗದ್ದೆಯಲ್ಲಿ ಪ್ರತ್ಯಕ್ಷಗೊಂಡಿದ್ದರು.ಲೋಕಸಭಾ ಚುನಾವಣೆ ಹಿನ್ನಲೆ ನಕ್ಸಲರು ಆಕ್ಟಿವ್ ಆಗಿದ್ದು ಕೇರಳದಿಂದ ಬಂದಿರಬಹುದೆಂದು ಶಂಕಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸರಿಂದ ಕಟ್ಟೆಚ್ಚರ ವಹಿಸಿದ್ದು ತಪಾಸಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular