ತುಮಕೂರು : ಹಣಕ್ಕಾಗಿ ಜನ ಗಳು ಯಾವ ರೀತಿಯ ದುಸ್ಸಾಹಕ್ಕೆ ಬೇಕಾದರೂ ಕೈ ಹಾಕುತ್ತಾರೆ ಎಂಬುದಕ್ಕೆ ಇಲ್ಲಿದೆ ಒಂದು ಸ್ಟೋರಿ .ಬಾಲಕಿ ಲಕ್ಷ್ಮೀ ತಾಯಿ ನರಸಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಮೃತ ತಾಯಿ ನರಸಮ್ಮ ಹಾಗೂ ಬಾಲಕಿ ಲಕ್ಷ್ಮೀ ಹೆಸರಿನಲ್ಲಿ ಜಂಟಿ ಖಾತೆ ಇತ್ತು.ಖಾತೆಯಲ್ಲಿ 4 ಲಕ್ಷ ರೂಪಾಯಿ ಹಣವಿತ್ತು, ಈ ಬ್ಯಾಂಕ್ ಖಾತೆಗೆ ಕಣ್ಣು ಹಾಹಿಸಿದ ದೊಡ್ಡಮ್ಮ ನರಸಮ್ಮ ಚೆಕ್ಗೆ ಸಹಿ ಮಾಡು ಅಂತ ಬಾಲಕಿ ಲಕ್ಷ್ಮೀಗೆ ಕಿರುಕುಳ ನೀಡಿದ್ದಾಳೆ. ಬಳಿಕ ಬಾಲಕಿ ಲಕ್ಷ್ಮೀ ಒಪ್ಪದಿದ್ದಾಗ ನರಸಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಬಾಲಕಿ ಲಕ್ಷ್ಮೀ ತೊಡೆಗೆ ಸುಟ್ಟಿದ್ದಾಳೆ. ಈ ವೇಳೆ ಬಾಲಕಿ ಲಕ್ಷ್ಮೀ ಕಿರುಚದಂತೆ ನಂಜಮ್ಮ ಮಗ ಬಸವರಾಜ್ ಆಕೆಯ ಬಾಯಿ ಮುಚ್ಚಿಸಿದ ಘಟನೆ ಮಧುಗಿರಿ ತಾಲೂಕಿನ ಪೂಜಾರಹಳ್ಳಿಯಲ್ಲಿ ವರದಿಯಾಗಿದೆ.
ತಾಯಿ ಇಲ್ಲದ ತಬ್ಬಲಿ ಮಗುವಿನ ರೋದನೆಯನ್ನು ಕಂಡು ಜನ ಆಕ್ರೋಶಗೊಂಡಿದ್ದಾರೆ. ಇನ್ನು ಬಾಲಕಿ ಲಕ್ಷ್ಮೀ ಐದನೇ ತರಗತಿ ಓದುತ್ತಿದ್ದಾಳೆ. ಆಕೆಯ ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ಪರೀಕ್ಷೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕಿಯನ್ನ ಕರೆತರಲು ಹೋಗಿದ್ದ ಲಕ್ಷ್ಮೀ ಅಜ್ಜಿ ಹೋಗಿದ್ದರು. ಹೀಗಾಗಿ ಶಿಕ್ಷಕರು ಮತ್ತು ಸಂಬಂಧಿಕರು ಬಾಲಕಿಯನ್ನು ಊರಿಗೆ ಕರೆಸಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.ಈ ವೇಳೆ ಬಾಲಕಿಗೆ ಟೀ ಚೆಲ್ಲಿದೆ ಎಂದು ಸುಳ್ಳು ಹೇಳಿ ಲಕ್ಷ್ಮೀ ದೊಡ್ಡಮ್ಮ ನಂಜಮ್ಮ ಬೆದರಿಕೆ ಹಾಕಿದ್ದಳು. ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಸದ್ಯ ಬಾಲಕಿ ಲಕ್ಷ್ಮೀಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


