ಬೆಂಗಳೂರು : ಲೋಕಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು ಕರ್ನಾಟಕದ 28 ಕ್ಷೇತ್ರಗಳ ಪೈಕಿ 18 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಬಾಕಿ 10 ಕ್ಷೇತ್ರಗಳ ಟಕೆಟ್ ಗೊಂದಲ ಮುಂದುವರೆದಿದೆ.ಚುನಾವಣೆ ಸಂಬಂಧ ನಡೆಯುತ್ತಿದ್ದ ಬಿಜೆಪಿ ಮೀಟಿಂಗ್ ಅಂತ್ಯವಾಗಿದೆ.
ಬಿಜೆಪಿಗೆ ಕಗ್ಗಂಟಾಗಿರೋ ಕ್ಷೇತ್ರಗಳಾವುವು?
1.ಮೈಸೂರು, 2.ಉತ್ತರಕನ್ನಡ, 3.ಚಾಮರಾಜನಗರ, 4.ಬೆಂಗಳೂರು ಉತ್ತರ. 5.ಚಿಕ್ಕಬಳ್ಳಾಪುರ. 6.ಚಿಕ್ಕಮಗಳೂರು, 7.ಹಾವೇರಿ, 8.ಬೆಳಗಾವಿ, 9.ಮಂಗಳೂರು, 10.ದಾವಣಗೆರೆ ಕ್ಷೇತ್ರದ ಟಿಕೆಟ್ ಕಗ್ಗಂಟಾಗಿ ಉಳಿದೆ. ಯಾಕಂದ್ರೆ, ಈ ಕ್ಷೇತ್ರಗಳಿಗೆ ಟಿಕೆಟ್ ಆಕಾಂಕ್ಷಿಗಳು ಇಬ್ಬರು-ಮೂವರು ಇದ್ದಾರೆ. ಹೀಗಾಗಿ ಈ ಕ್ಷೇತ್ರಗಳ ಟಿಕೆಟ್ ಗೊಂದಲ ಮುಂದುವರೆದಿದೆ.
ಮೂಲಗಳ ಪ್ರಕಾರ ಶೋಭಾಗೆ ಟಿಕೇಟ್ ಬಹುತೇಕ ಫಿಕ್ಸ್ ಆಗಿದ್ದು ಕ್ಷೇತ್ರ ಬದಲಾಗಿದೆ. ದಕ್ಷಿಣ ಕನ್ನಡ ಟಿಕೆಟ್ ನಳಿನ್ ಕುಮಾರ್ ಕಟೀಲ್ಗೆ ಟಿಕೆಟ್ ಬಹುತೇಕ ಡೌಟ್ ಆಗಿದೆ ಎಂಬ ಮಾಹಿತಿ ದೊರೆತಿದೆ. ಮೈಸೂರಿನಿಂದ ಯದುವೀರ್ ಒಡೆಯರ್ಗೆ ಬಹುತೇಕ ಫಿಕ್ಸ್ ಆಗಿದ್ದು ಪ್ರತಾಪ್ ಸಿಂಹಗೆ ಮೈಸೂರು ಟಿಕೆಟ್ ಸಿಗೋದು ಅನುಮಾನವಾಗಿದೆ.ತುಮಕೂರಿನಿಂದ ವಿ.ಸೋಮಣ್ಣಗೆ ಟಿಕೆಟ್ ಸಿಗೋ ಸಾಧ್ಯತೆಯಿದ್ದು ಬೆಂಗಳೂರು ಗ್ರಾಮಾಂತರಕ್ಕೆ ಡಾ. ಮಂಜುನಾಥ್, ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಸ್ಪರ್ಧೆ ಮಾಡಲಿದ್ದು, ಚಿಕ್ಕಬಳ್ಳಾಪುರದ ಟಿಕೆಟ್ ಡಾ.ಕೆ.ಸುಧಾಕರ್ಗೆ ಸಿಗಲಿದೆ ಎಂದು ತಿಳಿದುಬಂದಿದೆ.
ಫೈನಲ್ ಮಾಡಲಾದ ಬಿಜೆಪಿ ಟಿಕೆಟ್ ಪಟ್ಟಿ ಇಲ್ಲಿದೆ..!
ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್.ಮಂಜುನಾಥ್
ಚಿತ್ರದುರ್ಗ- ನಾರಾಯಣಸ್ವಾಮಿ
ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ
ಬೆಳಗಾವಿ- ಜಗದೀಶ್ ಶೆಟ್ಟರ್
ಚಿಕ್ಕೋಡಿ- ರಮೇಶ್ ಕತ್ತಿ
ಕಲ್ಬುರ್ಗಿ- ಉಮೇಶ್ ಜಾದವ್
ಬಿಜಾಪುರ- ಗೋವಿಂದ ಕಾರಜೋಳ
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್
ಶಿವಮೊಗ್ಗ – ಬಿ.ವೈ.ರಾಘವೇಂದ್ರ
ಹಾವೇರಿ – ಬಸವರಾಜ ಬೊಮ್ಮಾಯಿ
ತುಮಕೂರು- ವಿ.ಸೋಮಣ್ಣ
ಮೈಸೂರು – ಯದುವೀರ್ ಒಡೆಯರ್
ಬೆಳಗಾವಿ- ಜಗದೀಶ್ ಶೆಟ್ಟರ್
ಚಿಕ್ಕೋಡಿ – ರಮೇಶ್ ಕತ್ತಿ


