ಬೆಂಗಳೂರು: ಕಳೆದ ವಾರ ಬೆಂಗಳೂರಿನ ನೈಋತ್ಯ ರೈಲ್ವೆ ಮೂಲಕ ಹಾದುಹೋಗುವ ವಂದೇ ಭಾರತ್ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದು, ಇದರಿಂದ ರೈಲ್ವೆ ಇಲಾಖೆಗೆ ಭಾರೀ ನಷ್ಟವನ್ನುಂಟು ಮಾಡಿತ್ತು, ಗಾಜು ಹಾಗೂ ಇನ್ನಿತರ ಭಾಗಗಳಿಗೆ ಹಾನಿಯಾಗಿದ್ದು ಇದೀಗ ಈ ಪ್ರಕರಣ ಸಂಬಂಧ ಪೊಲೀಸರು 50 ಮಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನಿಂದ ಬೇರೆ ಬೇರೆ ಭಾಗಕ್ಕೆ ಹೋಗುವ ಮೂರು ವಂದೇ ಭಾರತ್ ರೈಲುಗಳ ಮೇಲೆ 50 ಬಾರಿ ಕಲ್ಲು ತೂರಾಟ ಮಾಡಲಾಗಿತ್ತು . ಸ್ಲಂ ಭಾಗದಲ್ಲಿನ ಕಿಡಿಗೇಡಿಗಳು ನಿತ್ಯ ಒಂದಲ್ಲ ಒಂದು ವಂದೇ ಭಾರತ್ ರೈಲಿಗೆ ಕಲ್ಲು ಎಸೆಯುವುದನ್ನೇ ರೂಢಿ ಮಾಡಿಕೊಂಡಿದ್ದರು.ದುಷ್ಕರ್ಮಿಗಳು ಚಲಿಸುವ ಅನೇಕ ರೈಲುಗಳಿಗೆ ಕಲ್ಲು ಎಸೆದು ಹಾನಿ ಮಾಡುತ್ತಿದ್ದ ಚಾಲಿ ಮಾಡುತ್ತಿದ್ದು ಈ ಬಗ್ಗೆ ಬಲೆಬೀಸಿದ ರೈಲ್ವೆ ಪೊಲೀಸರು ಬೆಂಗಳೂರಿನಲ್ಲಿ ಒಟ್ಟು 50 ಜನರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಪೊಲೀಸರು ರೈಲ್ವೇ ಕಾಯ್ದೆ ಸೆಕ್ಷನ್ 153ರ ಅಡಿಯಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಮತ್ತು ಸೆಕ್ಷನ್ 153 (ಉದ್ದೇಶ ಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಕ್ರಿಮಿನಲ್ ಅಪರಾಧವಾಗಿದೆ. ರೈಲ್ವೇ ಕಾಯ್ದೆ ಸೆಕ್ಷನ್ 153ರ ಅಡಿಯಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.


