ಉಡುಪಿ : ರಾಮಜನ್ಮಭೂಮಿ ಉದ್ಘಾಟನೆಯಾದ ನಂತರ ಅಯ್ಯೋಧ್ಯೆಗೆ ಲಕ್ಷಾಂತರ ಭಕ್ತರು ತೆರಳುತ್ತಿದ್ದು ರಾಮಲಲ್ಲಾನ ದರ್ಶನ ಪಡೆದು ಬರುತ್ತಿದ್ದಾರೆ. ದೇಶದ ವಿವಿಧೆಡೆಯಿಂದ ಕೋಟ್ಯಂತರ ಭಕ್ತರು ಅಯೋಧ್ಯೆಗೆ ತೆರಳುತ್ತಿದ್ದಾರೆ.ಈ ನಡುವೆ ರಾಮಲಲ್ಲಾ ದರ್ಶನ ಪಡೆಯಲು ಉಡುಪಿಯಿಂದ ತೆರಳಿದ್ದ ಭಕ್ತರೊಬ್ಬರು, ರಾಮನ ದರ್ಶನ ಪಡೆದು ಕೊನೆಯುಸಿರೆಳೆದಿರುವ ಘಟನೆ ವರದಿಯಾಗಿದೆ.

ಮೃತರನ್ನು ಉಡುಪಿಯ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಪಾಂಡುರಂಗ ಶಾನುಭೋಗ್ ಎಂದು ತಿಳಿದುಬಂದಿದೆ.ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಾನುಭಾಗ್ ಅವರು, ದೃಷ್ಟಿ ಇಲ್ಲದಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು.
ಅಯೋಧ್ಯೆಯ ರಾಮಲಲ್ಲಾನ ಮಂದಿರಕ್ಕೆ ಹೋಗಬೇಕೆಂದು ಇವರು ನೆನೆಸಿಕೊಂಡಿದ್ದರು.ಅದರಂತೆಯೇ ಇಂದು ಬೆಳಗ್ಗೆ ರಾಮಲಲ್ಲಾನಿಗೆ ಕೈಮುಗಿದು, ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ಪ್ರಸಾದ ಪಡೆದಿದ್ದರು. ಅಂತೆಯೇ ಅಪರಾಹ್ನದ ಪಲ್ಲಕ್ಕಿಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ಅವರಿಗೆ ಹೃದಯಾಘಾತವಾಗಿದೆ . ಸಮೀಪವರ್ತಿಗಳು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
ಪೇಜಾವರ ಶ್ರಿ ಆಘಾತ
ಬೆಳಿಗ್ಗೆ ಶಾನಾಭಾಗರಿಗೆ ಸಂತೋಷದಿಂದ ತೀರ್ಥಪ್ರಸಾದ ನೀಡಿ , ಸಂಸ್ಕೃತ ದಲ್ಲೇ ಸಂಭಾಷಣೆ ನಡೆಸಿ ಕುಶಲೋಪರಿ ನಡೆಸಿದ್ದ ಪೇಜಾವರ ಶ್ರೀಗಳು ಈ ಸುದ್ದಿ ತಿಳಿದು ಆಘಾತ ವ್ಯಕ್ತಪಡಿಸಿದ್ದು , ಅವರ ಆತ್ಮಕ್ಕೆ ರಾಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ . ವಿ ಹಿಂಪ ಮುಖಂಡ ಗೋಪಾಲ್ ಜಿ , ಮಾಜಿ ಶಾಸಕ ರಘುಪತಿ ಭಟ್ ಸ್ಥಳದಲ್ಲಿದ್ದು ಮುಂದಿನ ವ್ಯವಸ್ಥೆಗಳ ಬಗ್ಗೆ ಪ್ರವೃತ್ತರಾಗಿದ್ಧಾರೆ .


