Friday, March 13, 2026
Flats for sale
Homeರಾಜ್ಯಪುತ್ತೂರು : ಭಯೋತ್ಪಾದನಾ ವಿರೋಧಿ ರ್ಯಾಲಿ ಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಭಜರಂಗದಳ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ...

ಪುತ್ತೂರು : ಭಯೋತ್ಪಾದನಾ ವಿರೋಧಿ ರ್ಯಾಲಿ ಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಭಜರಂಗದಳ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಬಂಧನ.

ಪುತ್ತೂರು: ತುಮಕೂರಿನಲ್ಲಿ ಭಯೋತ್ಪಾದನಾ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಭಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಅವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ತುಮಕೂರಿನಲ್ಲಿ ಇಂದು ನಡೆಯಲಿರುವ ಭಯೋತ್ಪಾದನಾ ವಿರೋಧಿ ಪ್ರತಿಭಟನಾ ರಾಲಿಯಲ್ಲಿ ಮುಖ್ಯ ಭಾಷಣಕಾರರಾಗಿದ್ದ ಮುರಳೀಕೃಷ್ಣ ಹಸಂತ್ತಡ್ಕ ಅವರನ್ನುಬೆಂಗಳೂರು ಗ್ರಾಮಾಂತರ ಕುಣಿಗಲ್ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ತೆರಳುವ ದಾರಿ ಮಧ್ಯೆಯೇ ಅವರನ್ನು ಬಂಧಿಸಿದ ಪೋಲೀಸರ ನಡೆಗೆ ಎಲ್ಲೆಡೆಯೂ ವಿರೋಧ ವ್ಯಕ್ತವಾಗಿದೆ.

ಕಾಂಗ್ರೇಸ್ ರಾಜ್ಯದಲ್ಲಿ ಅಡಳಿತ ಬಂದ ಮೇಲೆ ಭಯೋತ್ಪಾದನೆಯ ಕರಿನೆರಳು ದಟ್ಟವಾಗಿರುವುದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಯಲ್ಲಿ ಪಾಕ್ ಪರವಾಗಿ ಘೋಷಣೆ,ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಇವೆಲ್ಲಾ ಘಟನೆಯಿಂದ ರಾಜ್ಯದ ಜನತೆ ಭಯಭೀತರಾಗುವಂತೆ ಮಾಡಿದೆ.ಆದ್ದರಿಂದ ರಾಜ್ಯದ ಜನತೆಗೆ ನೈತಿಕಸ್ಥೈರ್ಯ ತುಂಬಲು ಅಲ್ಪಸಂಖ್ಯಾತರ ಮಿತಿಮೀರಿದ ತುಷ್ಟೀಕರಣಕ್ಕೆ ಕಡಿವಾಣ ಹಾಕಲು ಸಂಘಪರಿವಾರದ ಮುಖಂಡ ಮುರಳೀಕೃಷ್ಣ ಹಸಂತಡ್ಕರವರು ತುಮಕೂರಿಗೆ ಪ್ರತಿಭಟನೆಗೆ ತೆರಳುವ ಸಂದರ್ಭದಲ್ಲಿ ಬಂಧಿಸಿರುವುದು ಖಂಡನೀಯ ಹಾಗೂ ಈ ರೀತಿಯ ವರ್ತನೆಯಿಂದ ರಾಜ್ಯದ ಕಾಂಗ್ರೇಸ್ ಸರಕಾರ ಭಯೋತ್ಪಾದನೆಯನ್ನು ಮಾಡುವವರಿಗೆ ಪರೋಕ್ಷವಾಗಿ ಬೆಂಬಲ ನೀಡಿದಾಗೆ ಆಗುತ್ತದೆ ಎಂದು ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವಾ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular