ಮಂಗಳೂರು : ಲೈಫ್ ಗಾರ್ಡ್ ಸೂಚನೆ ಧಿಕ್ಕರಿಸಿ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಕೊಚ್ಚಿಹೋದ ಘಟನೆ ಮಂಗಳೂರಿನ ಪಣಂಬೂರು ಬೀಚಿನಲ್ಲಿ ನಡೆದಿದೆ.
ಮೃತರನ್ನು ಮಿಲನ್(20), ಲಿಖಿತ್(18), ನಾಗರಾಜ್(24) ಎಂದು ತಿಳಿಯಲಾಗಿದೆ.ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಮಿಲನ್, ಕೈಕಂಬದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಲಿಖಿತ್, ನಾಗರಾಜ್ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿದ್ದರು ಎಂದು ತಿಳಿದುಬಂದಿದೆ.
ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧ ಕಾರ್ಯ ನಡೆಸುತ್ತಿದ್ದು.ನಾಪತ್ತೆಯಾದ ಯುವಕರಿಗಾಗಿ ಮುಳುಗತಜ್ಞರು ಹುಡುಕಾಟ ನಡೆಸುತ್ತಿದ್ದಾರೆ.ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


