ಗೋಕಾಕ : ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಶ್ರೀಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶರಣ ಸಂಸ್ಕ್ರತಿ ಉತ್ಸವ 2024. 19 ನೆಯ ಉತ್ಸವದ 2 ನೆಯ ದಿನವಾದ ಇಂದು ಪತ್ರಕರ್ತರ ಸಮಾವೇಶ ಮತ್ತು ಕಾಯಕಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಸುವರ್ಣ ಚಾನಲ್ ಸಂಪಾದಕರಾದ ಅಜೀತ ಹನುಮಕ್ಕನವರ ಹಾಗೂ ವಿವಿದ ಗಣ್ಯ ಮಾನ್ಯರು ಸಸಿಗೆ ನೀರು ಉಣಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಸನ್ಮಾನ ಸ್ವೀಕರಿಸಿ ಅಜೀತ ಹನುಮಕ್ಕನವರ ಇವರು ಮಾತನಾಡಿ ಪತ್ರಿಕಾ ದರ್ಮ ಅಂದರೆ ಸತ್ಯ ಹೇಳಬೇಕು ಎಷ್ಟು ಸಾದ್ಯವೋ ಹೆಚ್ಚು ಜನರಿಗೆ,ವಿಧಾನಸೌದದಲ್ಲಿನ ಜನಪ್ರತಿನಿಧಿಗಳಿಗೆ ತಲುಪಿಸುವಂತಿರಬೇಕು. ಪತ್ರಿಕೋದ್ಯಮ ಮಾತಿನಲ್ಲಿ ಮಾತ್ರ ನಾಲ್ಕನೆಯ ಅಂಗ ಆದರೆ ಪತ್ರಕರ್ತರಿಗೆ ಸಿಗಬೇಕಾದ ಗೌರವ,ಮಾನ್ಯತೆ ಇಲ್ಲಿಯವರೆಗೂ ಸಿಕ್ಕಿಲ್ಲ ಎಂದು ತಮ್ಮ ಅಬಿಪ್ರಾಯ ವ್ಯಕ್ತಪಡಿಸಿದರು.
ಅದರ ಜೊತೆಯಲ್ಲಿ ದೊಡ್ಡ ದೊಡ್ಡ ಚಾನಲನಲ್ಲಿರುವಾಗ ಯಾರೋ ಯು ಟ್ಯೂಬನಲ್ಲಿ ಮಾಡ್ತಾಯಿದ್ದಾರೆಂದು ನಕಲಿ ಪತ್ರಕರ್ತರೆಂದು ಅನ್ನೊದು ಅಲ್ಲ ಅದು ಆತ್ಮಸಾಕ್ಷಿಯ ಮೇಲಿರುತ್ತದೆ.ಎಲ್ಲ ಸಮಾಜದಲ್ಲಿರುವಂತೆ ನಮ್ಮಲ್ಲಿಯೂ ಕೂಡ ದೊಡ್ಡ ದೊಡ್ಡ ಬ್ರಷ್ಟರು ಇದ್ದಾರೆ. ಅವರನ್ನು ತಡೆಗಟ್ಟುವ ಕೆಲಸ ಮಾಡಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿ ಬೇರೆ ಬೇರೆ ವರ್ಗಗಳಿಗೆ ಶರಣ ಸಂಸ್ಕ್ರತಿ ಮೂಲಕ ಪ್ರಶ್ನಿಸುವ ವೇದಿಕೆ ಮಾಡಿಕೊಟ್ಟ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಹಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಕಾಯಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದರು.ಇನ್ನು ವೇದಿಕೆ ಮೇಲೆ ಈ ಸಂದರ್ಭದಲ್ಲಿ ಬಟಕುರ್ಕಿ ಶ್ರೀಗಳು.ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಮತ್ತು ಮುಖ್ಯ ಅತಿಥಿಗಳು ಸೇರಿದಂತೆ ಇನ್ನೂಳಿದ ಪತ್ರಕರ್ತರು ಗಣ್ಯಮಾನ್ಯರು ಈ ಉತ್ಸವದಲ್ಲಿ ಬಾಗಿಯಾಗಿದ್ದರು.


