ಮಂಗಳೂರು : ಸೋಮವಾರದಿಂದ ನಾಪತ್ತೆಯಾಗಿದ್ದ 30 ವರ್ಷದ ವ್ಯಕ್ತಿಯೊಬ್ಬರು ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವರದಿಗಳ ಪ್ರಕಾರ, ಗೌತಮ್ ಅವರು ಸೋಮವಾರ ಸಂಜೆ ತೊಕ್ಕೊಟ್ಟುವಿನ ಬಬ್ಬುಸ್ವಾಮಿ ದೈವದ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಹೊರೆಕಾಣಿಕೆಯಲ್ಲಿ ಭಾಗವಹಿಸಿದ್ದರು. ಆದರೆ, ತಡರಾತ್ರಿ ಮನೆಗೆ ಹಿಂತಿರುಗಿದ ನಂತರ ಮನೆಯಲ್ಲಿ ಕಿರಿಕ್ ಉಂಟಾಗಿ ರಾತ್ರೆ ಸಮಯದಲ್ಲಿ ನೀರಿಗೆ ಹಾರಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಮನೆಗೆ ಬಾರದೆ ಇರುವುದನ್ನು ತಿಳಿದ ಮನೆಯವರು ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು ಮದುವೆಯಾಗಿ ವಿಚ್ಚೇದನವಾದ ಬಳಿಕ ಅತಿಯಾಗಿ ಮದ್ಯಸೇವನೆ ಮಾಡುತ್ತಿದ್ದು ಮಾನಸಿಕವಾಗಿ ನೊಂದಿದ್ದ ಎಂದು ತಿಳಿದು ಬಂದಿದೆ.
ಆತನಿಗಾಗಿ ತೀವ್ರ ಹುಡುಕಾಟ ನಡೆಸಿದ ಬಳಿಕ ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ಅವರ ಶವ ಪತ್ತೆಯಾಗಿದೆ.


