ಮಂಗಳೂರು: ಕ್ರೈಸ್ತ ಸಂಸ್ಥೆಗಳು ಒಗ್ಗಟ್ಟಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಿದ ಘಟನೆ ವರದಿಯಾಗಿದೆ.ಸಂತ ಜೆರೊಸಾ ಶಾಲೆಯಲ್ಲಿ ಧರ್ಮ ಅವಹೇಳನದ ಪಾಠ ಆರೋಪ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ತೊಕ್ಕೊಟ್ಟುವಿನ ಹೋಲಿ ಏಂಜಲ್ ಶಾಲೆಯಲ್ಲಿ ಪ್ರಾಥಮಿಕ ತರಗತಿ ಶಿಕ್ಷಕಿಯಾಗಿರುವ ಕವಿತಾ ಅವರು ಮಗಳು ಸಂತ ಜೆರೊಸಾ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಮಗಳ ಶಾಲೆಯಲ್ಲಿ ಕೇಳಿ ಬಂದ ಆರೋಪದ ಬಗ್ಗೆ ಅವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು.
ಈ ಬೆನ್ನಲ್ಲೇ ಇದೀಗ ಅವರಿಗೆ ಬೆದರಿಕೆ ಕರೆಗಳು ಆರಂಭವಾಗಿದೆ. ಜೊತೆಗೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಲೆಯಿಂದಲೂ ಗೇಟ್ ಪಾಸ್ ನಿಡಲಾಗಿದೆ.
ಘಟನೆಯ ದಿನ ಅಂದರೆ ಫೆ.10 ರಂದು ಶಿಕ್ಷಕಿ ಕವಿತಾ ಹೆತ್ತವರೊಂದಿಗೆ ಡಿಡಿಪಿಐ ಕಛೇರಿಗೆ ಬಂದಿದ್ದರು. ಈ ವೇಳೆ ಕವಿತಾ ಅವರು ಮಾತನಾಡಿದ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅಷ್ಟಕ್ಕೇ ಹೋಲಿ ಏಂಜಲ್ ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿ ಹುದ್ದೆಯಿಂದಲೇ ವಜಾ ಮಾಡಿದೆ. ನಿಮ್ಮ ಸೇವೆ ಇನ್ನು ಅಗತ್ಯ ಇಲ್ಲ ಅಂತಾ ಹೋಲಿ ಏಂಜಲ್ ಶಾಲೆಯಿಂದ ಗೇಟ್ ಪಾಸ್ ಕೊಡಲಾಗಿದೆ. ಆ ಬಳಿಕ ಕವಿತಾ ಅವರ ಮೊಬೈಲ್ಗೆ ವಿದೇಶಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಆರಂಭಿಸಿದವು.


