Thursday, March 12, 2026
Flats for sale
Homeಕ್ರೈಂಗಂಗಾವತಿ : ಸ್ವಾಮೀಜಿ ವೇಷದಲ್ಲಿ ವಂಚನೆಗೆ ಯತ್ನ: ಇಬ್ಬರನ್ನು ಥಳಿಸಿದ ಜನ.

ಗಂಗಾವತಿ : ಸ್ವಾಮೀಜಿ ವೇಷದಲ್ಲಿ ವಂಚನೆಗೆ ಯತ್ನ: ಇಬ್ಬರನ್ನು ಥಳಿಸಿದ ಜನ.

ಗಂಗಾವತಿ : ನಿಮ್ಮ ಕುಟುಂಬಕ್ಕೆ ಒಳಿತು ಮಡುತ್ತೇನೆ ಎಂದು ಹೇಳಿಕೊಂಡ ಬಂದ ಸ್ವಾಮೀಜಿ ಮತ್ತು ಆತನ ಶಿಷ್ಯನ ವೇಷದಲ್ಲಿ ಬಂದು ಇಬ್ಬರು ವಂಚಕರನ್ನು ಜನರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲ್ಲೂಕಿನ ಸಂಗಾಪುರದಲ್ಲಿ ಶನಿವಾರ ನಡೆದಿದೆ.

ಸಂಗಾಪುರ ಗ್ರಾಮದಲ್ಲಿ ದಲಿತ ಕೇರಿಯಲ್ಲಿ ಈ ಇಬ್ಬರು ವ್ಯಕ್ತಿಗಳು ಸಂಚರಿಸುತ್ತಾ ಭೀಕ್ಷೆ ಬೇಡಿದ್ದಾರೆ. ಬಳಿಕ ಅವರಿವರ ಬಳಿ ನಿಮ್ಮ ಕುಟುಂಬ ಸಮಸ್ಯೆ ಇತ್ಯರ್ಥ ಮಾಡಿ ಹಣದ ಹೊಳೆ ಹರಿಯುವಂತೆ ಮಾಡುತ್ತೇನೆ ಎಂದು ನಂಬಿಸಲು ಯತ್ನಿಸಿದ್ದಾರೆ.

ಸಿಕ್ಕಿ ಬಿದ್ದುದ್ದು ಹೇಗೆ..?:
ಈ ವ್ಯಕ್ತಿಗಳನ್ನು ಸಂಗಾಪುರ ಗ್ರಾಮದ ಲಕ್ಷ್ಮಿ ಎಂಬ ಮಹಿಳೆ ಪತ್ತೆ ಹಚ್ಚಿದ್ದಾಳೆ. ಲಕ್ಷ್ಮಿ ಎಂಬ ಸಂಗಾಪುರ ಗ್ರಾಮದ ಈ ಮಹಿಳೆಯನ್ನು ಹೊಸಪೇಟೆ ತಾಲ್ಲೂಕಿನ ನಲ್ಲಾಪುರ ಎಂಬ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಲಾಗಿದೆ.

ಇದೇ ಖದೀಮರು ಈ ಗ್ರಾಮಕ್ಕೆ ಫೆ.9ರಂದು ಅಮವಾಸ್ಯೆಯ ದಿನ ಕೆಂಚಪ್ಪ (ಲಕ್ಷ್ಮಿ ಅವರ ಮಾವ) ಎಂಬುವವರ ಮನೆಗೆ ಹೋಗಿದ್ದಾರೆ. ಲಕ್ಷ್ಮಿಗೆ ಹೆಣ್ಣು ಮಕ್ಕಳು ಇರುವ ಕಾರಣಕ್ಕೆ ಗಂಡು ಸಂತಾನ ಪ್ರಾಪ್ತಿಗೆ ಪೂಜೆ ಮಾಡಿಸಬೇಕು ಎಂದು ನಂಬಿಸಿದ್ದಾರೆ.

ಅದಕ್ಕೆ ಕೊಂಚ ಹಣ ವೆಚ್ಚವಾಗುತ್ತಿದ್ದು, ನಿಮ್ಮ ಮನೆಯ ಬೀರುವಿನಲ್ಲಿ ಐವ್ವತ್ತು ಸಾವಿರ ಮೊತ್ತದ ಹಣ ಇದೆ. ಅದನ್ನು ತಂದು ಕೊಟ್ಟರೆ ಗಂಡು ಸಂತಾನ ಪ್ರಾಪ್ತಿಗೆ ಪೂಜೆ ಮಾಡಿಸುತ್ತೇನೆ ಎಂದು ವಂಚಕರು ನಂಬಿಸಿ ಹಣ ಪಡೆದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಒಂದುವರೆ ಕೋಟಿ ಮೊತ್ತದಲ್ಲಿ ದೇಗುಲ ನಿರ್ಮಾಣ ಶನಿವಾರ ಸಂಗಾಪುರಕ್ಕೆ ಬಂದಾಗ ತವರು ಮನೆಗೆ ಬಂದಿದ್ದ ಲಕ್ಷ್ಮಿ, ಆಕಸ್ಮಿಕ ಈ ಗ್ರಾಮದಲ್ಲಿ ಜನರನ್ನು ವಂಚಿಸಲು ಬಂದಿದ್ದ ಖದೀಮರನ್ನು ಪತ್ತೆ ಹಚ್ಚಿ ಜನರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಜನ ಆ ಇಬ್ಬರು ವಂಚಕರನ್ನು ವಶಕ್ಕೆ ಪಡೆದು ಥಳಿಸಿದ್ದಾರೆ.

ಐವ್ವತ್ತು ಸಾವಿರ ಪಡೆದುಕೊಂಡಿದ್ದು ನಿಜ ಎಂದು ಒಪ್ಪಿಕೊಂಡ ಸ್ವಾಮಿ ವೇಷದಲ್ಲಿನ ಕಪಟಿ, ತನ್ನ ಮೊಬೈಲ್ ಮೂಲಕ ಯಾರಿಗೆ ಕರೆ ಮಾಡಿ ಪೋನ್ಪೇಗೆ ಹಣ ಹಾಕಿಸಿಕೊಂಡು 40 ಸಾವಿರ ಮರಳಿಸಿದ್ದಾನೆ. ಕೂಡಲೆ ಗ್ರಾಮಸ್ಥರು ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular