ಅಬುಧಾಬಿ: ನಾನು ಈಗ ಯುಎಇಗೆ ಬಂದರೂ ನನ್ನದೇ ಮನೆಗೆ ಬಂದ ಅನುಭವವಾಗಿದೆ. ನನ್ನ ಕುಟುಂಬದವರನ್ನು ಭೇಟಿಯಾಗಲು ನಾನು ಇಲ್ಲಿಗೆ ಬಂದಿದ್ದೇನೆ. ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅರಬ್ ಸಂಯುಕ್ತ ಸಂಸ್ಥಾನದಲ್ಲಿನ ಭಾರತೀಯರನ್ನು ಮಂಗಳವಾರ ಶ್ಲಾಘಿಸಿದ್ದಾರೆ.
ಅಬುಧಾಬಿಯ ಜಯೆದ್ ಸ್ಫೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಅಹ್ಲಾನ್ ಮೋದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ನೀವು ಹುಟ್ಟಿದ ಮಣ್ಣಿನ ಸುವಾಸನೆ ಹಾಗೂ 140 ಕೋಟಿ ಜನರ ಸಂದೇಶದೊAದಿಗೆ ನಾನು ಇಲ್ಲಿಗೆ ಬಂದಿದ್ದೇನೆ. ಅದೇನೆಂದರೆ ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತಿದೆ ಎಂದರು.
ನಾನು ಮೊದಲ ಸಲ ಇಲ್ಲಿಗೆ ಬಂದಾಗ ಭಾರತದ ಪ್ರಧಾನಿಯೊಬ್ಬರು ಮೂರು ದಶಕಗಳ ನಂತರ ಮೊದಲ ಬಾರಿ ಭೇಟಿ ನೀಡಿರುವ ಸಂದರ್ಭ. ಆಗ ನನಗೆ ಜಾಗತಿಕ ಮಟ್ಟದ ರಾಜತಾಂತ್ರಿಕ ವ್ಯವಹಾರ ಹೊಸದು. ಆ ಸಂದರ್ಭದಲ್ಲಿ ಆಗಿನ ರಾಜಕುಮಾರರು ನನ್ನನ್ನು ವಿಮಾನನಿಲ್ದಾಣದಲ್ಲೇ ಎದುರುಗೊಂಡಿದ್ದರು. ಇಂದು ಅಧ್ಯಕ್ಷರ ಸಹಿತ ಅವರ ಐವರು ಸಹೋದರರು ನನಗೆ ಸ್ವಾಗತ ನೀಡಿದ್ದಾರೆ. ಈ ಸೌಹಾರ್ದಯುತ ಸ್ವಾಗತ ಸಮಯದಲ್ಲಿ ಅವರ ಕಣ್ಣುಗಳಲ್ಲಿ ಹೊಳವು ಕಂಡುಬAದಿತ್ತು. ಅದನ್ನು ನಾನು ಯಾವತ್ತೂ ಮರೆಯಲಾರೆ. ಆ ಸ್ವಾಗತ ನನಗಷ್ಟೇ ದೊರಕಿರುವುದಲ್ಲ, ೧೪೦ ಕೋಟಿ ಭಾರತೀಯರನ್ನೇ ಸ್ವಾಗತಿಸಿರುವುದು ಎಂದು
ಬಣ್ಣಿಸಿದರು.
ಈ ಕಾರ್ಯಕ್ರಮಕ್ಕೂ ಮೊದಲು ಅವರು ಅಬುಧಾಬಿಯಲ್ಲಿರುವ ಭಾರತೀಯ ಸಮುದಾಯದವರ ಜೊತೆ ಸಂವಾದ ನಡೆಸಿದರು. ಅಬುಧಾಬಿಯಲ್ಲಿ ಭಾರತೀಯ ಸಮುದಾಯದವರು ಆದರದ ಸ್ವಾಗತ ನೀಡುವ ಮೂಲಕ ಬಹಳ ವಿಶ್ವಸನೀಯ ಗೌರವ ನೀಡಿದ್ದಾರೆ ಎಂದರು.
ಪ್ರಧಾನಿ ಮೋದಿ ಈ ದೇಶಕ್ಕೆ ಆಗಮಿಸಿದ ನಂತರ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಯಿದ್ ಅಲ್ ನಹನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಸಂಯುಕ್ತ ಅರಬ್ ಸಂಸ್ಥಾನಕ್ಕೆ ಎರಡು ದಿನಗಳ ಭೇಟಿ ನೀಡಿರುವ ಸಂದರ್ಭದಲ್ಲಿ ಅವರು ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನೂ ಉದ್ಘಾಟಿಸಲಿದ್ದಾರೆ. ಈ ಮಂದಿರವು ಶಾಂತಿ, ಸೌಹಾರ್ದತೆ ಹಾಗೂ ಸಹಿಷ್ಣುತೆಯ ಪ್ರತೀಕವಾಗಲಿದೆ.
2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನAತರ ಇದು ಅರಬ್ ಸಂಯುಕ್ತ ಸಂಸ್ಥಾನಕ್ಕೆ ನೀಡಿರುವ ಏಳನೇ ಭೇಟಿಯಾಗಿದೆ. ಕತಾರ್‌ಗೆ ಇದು ಅವರ ಎರಡನೇ ಭೇಟಿ.


