ಆನೇಕಲ್ : ಈ ಜಗತ್ತಿನಲ್ಲಿ ಯಾವರೀತಿಯ ಜನಗಳಿದ್ದಾರೆ ಎಂಬುದು ತಿಳಿಯೋದು ಕಷ್ಟ ,ಆದರೆ ವಂಚನೆ ಮಾಡುವವರನ್ನು ಜನಗಳು ನಂಬುವುದು ಹೆಚ್ಚು ಎಂಬುದು ನಿಜವಾದ ವಿಚಾರ.
ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್ಬಿಐ ಹೆಸರು ಹೇಳಿಕೊಂಡು ಬ್ಯಾಂಕ್ಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬಳು ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಆ್ಯಂಡ್ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ಸಹಿ ಇರುವ ನಕಲಿ ಕಾಪಿ ತೋರಿಸಿ ಚಂದಾಪುರು, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ನೂರಾರು ಜನವರಿಗೆ ವಂಚಿಸಿದ್ದು ಟ್ರಸ್ಗೆ ಆರ್ಬಿಐನಿಂದ 17 ಕೋಟಿ ಬಂದಿರುವುದಾಗಿ ಎಂದು ಹೇಳಿ ಜನರನ್ನು ಯಾಮಾರಿಸಿದ್ದಾಳೆ.
ಲೋನ್ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕು ನಂತರ ಅವರಿಂದ ದಾಖಲೆಗಳನ್ನು ಪಡೆದು ಕಂತೆ ಕಂತೆ ಹಣದ ನೋಟುಗಳ ವಿಡಿಯೋಗಳನ್ನ ಕಳುಹಿಸಿ ಜನರನ್ನು ಮರುಳು ಮಾಡುತಿದ್ದಳು,ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆಯ ಮಾತಿನ ತರಹ ಈ ಬಡಪಾಯಿ ಜನರನ್ನು ಬಲೆಗೆ ಬೀಳಿಸಿದ್ದಾಳೆ . ಒಬ್ಬರಿಗೆ 10 ಲಕ್ಷ ಲೋನ್ ನೀಡಿದರೆ ಅದರಲ್ಲಿ ಐದು ಲಕ್ಷ ಸಬ್ಸಿಡಿ ಎಂದು ನಂಬಿಸಿದ್ದು,ಇವಳನ್ನು ನಂಬಿದ ಜನರು ಸಾಲಮಾಡಿ ಲಕ್ಷಾಂತರ ರೂಪಾಯಿ ಹಣ ನೀಡುತಿದ್ದರು.
ಹಣ ನೀಡಿ ಹಲವು ತಿಂಗಳಾದರೂ ಲೋನ್ ನ ಮೊತ್ತ ಬ್ಯಾಂಕ್ ಅಕೌಂಟ್ ಗೆ ಜಮಾವಣೆ ಆಗದ ಕಾರಣ ವಂಚಕಿ ಪವಿತ್ರಾಳ ಕಳ್ಳಾಟ ಬಯಲಾಗಿದೆ.ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ತನಿಖೆ ನಡೆಯುತ್ತಿದೆ.


