Thursday, July 23, 2026
Homeಕ್ರೈಂಮಡಿಕೇರಿ ; ಕುಶಾಲನಗರ ಕೊಲೆ ಪ್ರಕರಣ - ಶೋರೂಮ್ ಮಾಲಿಕ ಸೇರಿ ಇಬ್ಬರ ಬಂಧನ .

ಮಡಿಕೇರಿ ; ಕುಶಾಲನಗರ ಕೊಲೆ ಪ್ರಕರಣ – ಶೋರೂಮ್ ಮಾಲಿಕ ಸೇರಿ ಇಬ್ಬರ ಬಂಧನ .

ಮಡಿಕೇರಿ ; ಕುಶಾಲನಗರದ ಕೊಡಗನ ಮೋಟಾರ್ ಸರ್ವಿಸ್ ವೆಸ್ಪ ಶೋರೂಮ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆಯಲ್ಲಿ ಶೋರೂಮ್ ನ ಮಾಲಿಕ ಟೈಲರಿಂಗ್ ಮಿಷಿನ ಕತ್ತರಿಯಿಂದ ಶಾಜಿದ್ ಎಂಬಾತನಿಗೆ ಚುಚ್ಚಿದ ಪರಿಣಾಮ ಆತ ಮೃತಪಟ್ಟಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂದಿತರನ್ನು ಶೋರೂಂ ಮಾಲಿಕ ಶ್ರೀನಿಧಿ ಹಾಗೂ ಆತನ ಗೆಳೆಯ ಆಲಿಂ ಎಂದು ಗುರುತಿಸಲಾಗಿದೆ.

ಶ್ರೀನಿಧಿಗೆ ಬೆಂಬಲವಾಗಿ ನಿಂತು ಕೊಲೆಗೆ ಪ್ರೋತ್ಸಾಹಿಸಿದ ಆತನ ಸ್ನೇಹಿತ ಆಲಿಂ ಮೇಲೆ ಕೂಡ ಕೊಲೆ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಕೂಡ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಉಪಮಹಾ ನಿರೀಕ್ಷಕರಾದ ಶ್ರೀ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ ರಾಜನ್ ಬೇಟಿ ನೀಡಿ ಪರಿಶೀಲಿಸಿ ತನಿಖಾಧಿಕಾರಿಗಳಿಗೆ ಸಲಹೆ ಸೂಚನೆಯನ್ನು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular