Thursday, March 12, 2026
Flats for sale
Homeಕ್ರೈಂಆನೇಕಲ್ : ಪ್ರೀತಿಸಿದ ಹುಡುಗಿಗೆ ಅಕ್ರಮ ಸಂಬಂಧ - ಕಣ್ಣಾರೆ ಕಂಡ ಪ್ರೇಮಿ ಆತ್ಮಹತ್ಯೆ.

ಆನೇಕಲ್ : ಪ್ರೀತಿಸಿದ ಹುಡುಗಿಗೆ ಅಕ್ರಮ ಸಂಬಂಧ – ಕಣ್ಣಾರೆ ಕಂಡ ಪ್ರೇಮಿ ಆತ್ಮಹತ್ಯೆ.

ಆನೇಕಲ್ : ಈ ಪ್ರೀತಿಯೇ ಇಷ್ಟು ಕಣ್ಣಿದ್ದು ಕುರುಡನ ತರಹ , ವಿಚ್ಛೇದಿತ ಯುವತಿಗೆ ಬಾಳು ಕೊಡಲು ಹೊರಟ ಪ್ರಿಯಕರ ನಿಗೆ ಶಾಕ್ ಉಂಟಾಗಿದೆ. ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇರುವುದನ್ನು ಕಣ್ಣಾರೆ ನೋಡಿದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅನ್ಬರಾಸನ್ ಎಂಬ ಯುವಕ ವಿದ್ಯಾ ಎಂಬಾಕೆಗೆ ಯನ್ನು ಪ್ರೀತಿಸುತಿದ್ದಳು ಇದಕ್ಕಿಂತ ಮೊದಲು ವಿದ್ಯಾಳಿಗೆ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿತ್ತು. ಬಳಿಕ ಆಕೆ ವಿಚ್ಚೇದನ ಪಡೆದಿದ್ದಳು. ಗಂಡ ಹೆಂಡತಿ ಎಂದು ಹೇಳಿ ಚಿಕ್ಕನಾಗಮಂಗಲದ ಬಾಡಿಗೆ ಮನೆ ಪಡೆದು ಲೀವ್​ ಇನ್ ರಿಲೇಷನ್​ನಲ್ಲಿದ್ದರು. ಈಗೆ ಜೀವನ ಸಾಗುತಿತ್ತು ಆದರೆ ವಿದ್ಯಾ ಐಟಿ ಕಂಪನಿ ಉದ್ಯೋಗಿಯಾಗಿದ್ದು ,ಅನ್ಬರಾಸನ್ ಫ್ಲಿಪ್ ಕಾರ್ಟ್​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಜೊತೆಯಲ್ಲಿ ಇರುವಾಗಲೇ ವಿದ್ಯಾಗೆ ಸಂತೋಷ್ ಎಂಬ ಯುವಕನ ಜೊತೆ ಲವ್ವಿಡವ್ವಿ ಶುರುವಾಗಿದೆ, ಈ ವಿಚಾರ ಅನ್ಬರಾಸನ್ ಗೆ ತಿಳಿದಿದ್ದು ಸಂತೋಷ್ ಆಗಾಗ್ಗೆ ಮನೆಗೆಬರುತಿದ್ದು ವಿದ್ಯಾಳ ಜೊತೆ ಸರಸಸಲ್ಲಾಪ ನಡೆಸುತ್ತಿರುವುದನ್ನು ಕಣ್ಣಾರೆ ಕಂಡಿದ್ದನು.ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.ಈ ಬಗ್ಗೆ ಮೃತನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಗನ ಅತ್ಮಹತ್ಯೆಗೆ ಯುವತಿಯೇ ಪ್ರಚೋದನೆ ನೀಡಿದ್ದಾಳೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಂತೋಷ್ ಹಾಗೂ ವಿದ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular