Friday, March 13, 2026
Flats for sale
Homeರಾಜಕೀಯಮುಂಬೈ : ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಎನ್‌ಸಿಪಿಯ ಅಧಿಕೃತ ಚಿಹ್ನೆ`` ಗಡಿಯಾರ’’ ಅಜಿತ್ ಪವಾರ್ ಪಾಲು.

ಮುಂಬೈ : ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಎನ್‌ಸಿಪಿಯ ಅಧಿಕೃತ ಚಿಹ್ನೆ“ ಗಡಿಯಾರ’’ ಅಜಿತ್ ಪವಾರ್ ಪಾಲು.

ಮುಂಬೈ : ಮಹಾರಾಷ್ಟ್ರ ಬಣ ರಾಜಕೀಯದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ- ಎನ್‌ಸಿಪಿಯ ಅಧಿಕೃತ ಚಿಹ್ನೆ “ ಗಡಿಯಾರ’’ ಪಕ್ಷದ ವರಿಷ್ಠ ಶರದ್ ಪವಾರ್ ಅವರಿಗೆ ಗಡಿಯಾರ ಕೈಕೊಟ್ಟಿದ್ದು,ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪಾಲಾಗಿದೆ.

ಚುನಾವಣಾ ಆಯೋಗ ಅಜಿತ್ ಪವಾರ್ ಅವರ ಪಕ್ಷವನ್ನು ಅಧಿಕೃತ ಪಕ್ಷವೆಂದು ಪರಿಗಣಿಸಲಾಗಿದ್ದು ಹೀಗಾಗಿ ಶರದ್ ಪವಾರ್ ಗುಂಪಿಗೆ ಹೊಸ ಚಿಹ್ನೆ ಆಯ್ಕೆ ಮಾಡಿಕೊಳ್ಳುವಂತೆ ಸಂಜೆಯ ತನಕ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ “ಉದಯಿಸುವ ಸೂರ್ಯ’’ ನ ಚಿಹ್ನೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ತಿಂಗಳಾಂತ್ಯದಲ್ಲಿ ರಾಜ್ಯಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಚಿಹ್ನೆ ಆಯ್ಕೆ ಮಾಡಿಕೊಳ್ಳುವಂತೆ ಆಯೋಗ ಸೂಚನೆ ನೀಡಿದೆ ಶರದ್ ಪವಾರ್ ತಮ್ಮ ಪಕ್ಷದ ಹೊಸ ಹೆಸರು ಮತ್ತು ಹೊಸ ಚುನಾವಣಾ ಚಿಹ್ನೆಯ ಬಗ್ಗೆ ಮಾಹಿತಿ ನೀಡಲು ಚುನಾವಣಾ ಆಯೋಗ ಇಂದು ಸಂಜೆ ವರೆಗೂ ಕಾಲಾವಕಾಶ ನೀಡಿದೆ. ಶರದ್ ಪವಾರ್ ಅವರು ಚುನಾವಣಾ ಆಯೋಗಕ್ಕೆ ಹೊಸ ಹೆಸರು ಮತ್ತು ಹೊಸ ಚುನಾವಣಾ ಚಿಹ್ನೆ ಸೂಚಿಸಲು ಸಾಧ್ಯವಾಗದಿದ್ದರೆ, ಅವರ ಶಾಸಕರು ಸ್ವತಂತ್ರರು ಎಂದು ಘೋಷಿಸುವ ಸಾಧ್ಯತೆ ಇದೆ.

ಮಂಗಳವಾರ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡು ಅಜಿತ್ ಪವಾರ್ ಪರ ತೀರ್ಪು ನೀಡಿದ್ದು, ಅಜಿತ್ ಪವಾರ್ನೇ ತೃತ್ವದ ಪಕ್ಷವೇ ನಿಜವಾದ ರಾಷ್ಟಿçÃಯವಾದಿ ಕಾಂಗ್ರೆಸ್ ಪಕ್ಷ ಎಂದು ಹೇಳಿದೆ.

ಪ್ರಜಾ ಪ್ರಭುತ್ವದ ಕಗ್ಗೊಲೆ: ಗಡಿಯಾದ ಚಿಹ್ನೆ ಅಜಿತ್ ಪವಾರ್ ಪಾಲಾಗುತ್ತಿದ್ದಂತೆ ಶರದ್ ಪವಾರ್ ಬಣ ಕೆಂಡ ಕಾರಿದ್ದು ಇದು ಪ್ರಜಾಪ್ರಭುತ್ವದ ಕಗ್ಗೋಲೆ ಎಂದಿದೆ. ಚುನಾವಣಾ ಆಯೋಗದ ಈ ನಿರ್ಧಾರಕ್ಕೆ ಶರದ್ ಪವಾರ್ ಪಾಳಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದುಎನ್‌ಸಿಪಿ ಸ್ಥಾಪಿಸಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಪಕ್ಷದ ನಾಯಕಿ ಸುಪ್ರಿಯಾ ಸುಳೆ ಹೇಳಿದ್ದಾರೆ. ಚುನಾವಣಾ ತನಗೆ ನ್ಯಾಯ ಒದಗಿಸಿಲ್ಲ ಆಯೋಗ, ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಇದು ಪ್ರಜಾ ಪ್ರಭುತ್ವದ ಕಗ್ಗೊಲೆ ಎಂದಿದ್ಧಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular