Friday, March 13, 2026
Flats for sale
Homeಜಿಲ್ಲೆಮಂಗಳೂರು: ಲಾರಿ ಹರಿದು 12 ವರ್ಷದ ಬಾಲಕಿ ದಾರುಣ ಸಾವು .

ಮಂಗಳೂರು: ಲಾರಿ ಹರಿದು 12 ವರ್ಷದ ಬಾಲಕಿ ದಾರುಣ ಸಾವು .

ಮಂಗಳೂರು : ಮುಕ್ಕ ಇಂಡಿಯನ್ ಪೆಟ್ರೋಲ್ ಪಂಪ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಎನ್‌ಐಟಿಕೆ ಶಾಲೆಯ 12 ವರ್ಷದ ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಲಾರಿ ಮೊದಲು ಸ್ಕೂಟರ್‌ಗೆ ಡಿಕ್ಕಿಯಾಗಿದ್ದು ಬಳಿಕ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಲಿಯಾದ ಬಾಲಕಿಯನ್ನು ಮಾನ್ವಿ ಎಂದು ಗುರುತಿಸಲಾಗಿದ್ದು, ಮುಕ್ಕಾದ ಮಿತ್ರಪಟ್ಟಣದ ನಿವಾಸಿ ಶ್ರೀಧರ್ ಅವರ ಪುತ್ರಿ ಎಂದು ತಿಳಿದುಬಂದಿದೆ.ಲಾರಿ ಚಾಲಕ ಕುಡಿದ ಮತ್ತಿನಲ್ಲಿದ್ದು ಸ್ಥಳೀಯರು ಚಾಲಕನ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಟ್ರಕ್ ಚಾಲಕನಿಗೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ.ಸುರತ್ಕಲ್ ಠಾಣೆ ಪೊಲೀಸರು ಕ್ಷಿಪ್ರವಾಗಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಟ್ರಕ್ ಮತ್ತು ಚಾಲಕ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular