Thursday, July 23, 2026
Homeರಾಜ್ಯಚಿತ್ರದುರ್ಗ: ಚಲಿಸುತ್ತಿರುವ ಕಾರಿನ ಟೈರ್​ ಸ್ಫೋಟ, ಇಬ್ಬರು ಸ್ಥಳದಲ್ಲೇ ಸಾವು.

ಚಿತ್ರದುರ್ಗ: ಚಲಿಸುತ್ತಿರುವ ಕಾರಿನ ಟೈರ್​ ಸ್ಫೋಟ, ಇಬ್ಬರು ಸ್ಥಳದಲ್ಲೇ ಸಾವು.

ಚಿತ್ರದುರ್ಗ : ಅತೀವೇಗ ಸಾವಿಗೆ ಕಾರಣ ಎಂಬ ನಾಮಫಲಕ ಹಾಕಿದ್ದರು ಅತಿವೇಗದ ಚಾಲನೆಗೆ ಮಿತಿಇಲ್ಲದಂತಾಗಿದೆ ರಾಜ್ಯದಲ್ಲಿ ಅಪಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಎಷ್ಟೇ ಸಂಚಾರ ನಿಯಮಗಳನ್ನು ಅಳವಡಿಸಿದರೂ ಕೂಡ ಅಪಘಾತ ಸಂಖ್ಯೆ ಹೆಚ್ಚಳವಾಗುತ್ತಿದೆ.

ಚಲಿಸುತ್ತಿರುವ ಕಾರಿನ ಟೈರ್​ ಸ್ಫೋಟಗೊಂಡು ಕಾರು ಪಲ್ಟಿಯಾದ ಘಟನೆ ಚಿತ್ರದುರ್ಗ ತಾಲೂಕಿನ ಕಾತ್ರಾಳ್ ಕೆರೆ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮುತ್ತುಸ್ವಾಮಿ(69) ಹಾಗೂ ಪಾಂಡುರಂಗ(32) ಮೃತ ರ್ದುದೈವಿಗಳು. ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ದಾವಣಗೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.

ಈ ಕುರಿತು ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular