Friday, March 13, 2026
Flats for sale
Homeಜಿಲ್ಲೆಸುಳ್ಯ ; ನೂತನ ಮಂಡಲ ಸಮಿತಿ ಅಧ್ಯಕ್ಷರ ಘೋಷಣೆ ಬೆನ್ನಿಗೆ ಬಿಜೆಪಿ ಕಚೇರಿಗೆ ಬೀಗ ಜಡಿದ...

ಸುಳ್ಯ ; ನೂತನ ಮಂಡಲ ಸಮಿತಿ ಅಧ್ಯಕ್ಷರ ಘೋಷಣೆ ಬೆನ್ನಿಗೆ ಬಿಜೆಪಿ ಕಚೇರಿಗೆ ಬೀಗ ಜಡಿದ ಕಾರ್ಯಕರ್ತರು.

ಸುಳ್ಯ : ಸುಳ್ಯದಲ್ಲಿ ನೂತನ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ರ ನೇಮಕ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಸ್ಪೋಟಗೊಂಡ ಘಟನೆ ನಡೆದಿದೆ.

ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಜಿಲ್ಲಾಧ್ಯಕ್ಷರು ಶನಿವಾರ ಘೋಷಿಸಿದ್ದರು.ಈ ಹಿನ್ನೆಲೆ ಬಿಜೆಪಿ ನೂತನ ಅಧ್ಯಕ್ಷರ ಘೋಷಣೆ ಬೆನ್ನಿಗೆ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು, ಕಚೇರಿಗೆ ಬೀಗ ಜಡಿದ ಪ್ರಸಂಗ ನಡೆದಿದೆ.

ಸುಳ್ಯದ ಬಿಜೆಪಿ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು,ವಿನಯಕುಮಾರ್‌ ಬದಲಿಗೆ ವೆಂಕಟ್‌ ಅವರ ಹೆಸರು ಘೋಷಣೆಯಾಗಿದ್ದಕ್ಕೆ ಕಾರ್ಯಕತರು ಸಿಟ್ಟಿಗೆದ್ದರು. ಇದೇ ಕಾರಣದಿಂದಾಗಿ ಪಕ್ಷದ ಕಚೇರಿಗೆ ಬೀಗ ಜಡಿದ ಪ್ರಸಂಗ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular