Thursday, March 12, 2026
Flats for sale
Homeಜಿಲ್ಲೆಶಿರಸಿ : ದೇವಾಲಯದ ಒಳಗೆ ನುಗ್ಗಿ ಶಿವಲಿಂಗದ ಮೇಲೆ ಚಾಕ್ ನಲ್ಲಿ ಬರೆದ ಕಿಡಿಗೇಡಿಗಳು.

ಶಿರಸಿ : ದೇವಾಲಯದ ಒಳಗೆ ನುಗ್ಗಿ ಶಿವಲಿಂಗದ ಮೇಲೆ ಚಾಕ್ ನಲ್ಲಿ ಬರೆದ ಕಿಡಿಗೇಡಿಗಳು.

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರಬೈಲ್ ಗ್ರಾಮದ ಪ್ರಸಿದ್ಧ ಸೋಮೇಶ್ವರ ದೇವಾಲಯದ ಗರ್ಭಗುಡಿಯಲ್ಲಿದ್ದ ಶಿವಲಿಂಗದ ಮೇಲೆ ಕಿಡಿಗೇಡಿಗಳು ಚಾಕ್ ಪೀಸ್ ನಿಂದ ಬರೆದು ವಿಕೃತಿ ಮೆರೆದಿರುವ ಘಟನೆ ವರದಿಯಾಗಿದೆ.

ಬೆಳಿಗ್ಗೆ ಪೂಜೆಯ ಕಾರ್ಯಕ್ಕೆ ತಯಾರುಮಾಡಲು ಬರುವ ಸಮಯದಲ್ಲಿ ಗರ್ಭಗುಡಿ ಬಾಗಿಲು ತೆರೆದಾಗ ಅರ್ಚಕರು ಶಾಕ್ ಆಗಿದ್ದಾರೆ. ದೇವಸ್ಥಾನದ ಗರ್ಭಗುಡಿಯಲ್ಲಿರುವ ಸೋಮೇಶ್ವರ ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರಗಳಲ್ಲಿ ಬರೆಯಲಾಗಿದೆ.ಕಿಡಿಗೇಡಿಗಳು ದೇವಾಲಯದ ಒಳಗೆ ಹೇಗೆ ಅಕ್ರಮ ಪ್ರವೇಶಿಸಿದ್ದಾರೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.

ದೇವಾಲಯದ ಶಿವಲಿಂಗದ ಮೇಲೆ ಜೆಇಎಸ್ 2024, 2026 ಎಂದು ಬರೆಯಲಾದ್ದು ಶಿವಲಿಂಗದ ಮೇಲಿನ ಅಕ್ಷರಗಳು ಹಲವು ಅನುಮಾನಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular