ಉಡುಪಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಪಿ ಪರ್ಯಾಯಕ್ಕೆ ಶುಭ ಹಾರೈಸಿದ್ದಾರೆ. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಅನುಯಾಯಿ ತಿರುಪತಿ ವೆಂಕಟೇಶ್ ಅವರು ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿ ಪ್ರಧಾನ ಮಂತ್ರಿಗಳಿಗೆ ಔಪಚಾರಿಕ ಆಹ್ವಾನವನ್ನು ಹಸ್ತಾಂತರಿಸಿದರು.ಆ ಸಂಧರ್ಭದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ನೆನೆದು ಸ್ಮರಿಸಿದರು.
ಈ ಸಂದರ್ಭದಲ್ಲಿ ತಾವು ಗುಜರಾತ್ ಸಿಎಂ ಆಗಿದ್ದಾಗ 2008-2010ರಲ್ಲಿ ಪುತ್ತಿಗೆ ಶ್ರೀಗಳ ಮೂರನೇ ಪರ್ಯಾಯ ಅವಧಿಯಲ್ಲಿ ತಾವು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದನ್ನು ಪ್ರಧಾನಿ ಸ್ಮರಿಸಿದರು.


