Thursday, July 16, 2026
HomeUncategorizedಹೈದರಾಬಾದ್ : ಒಂದೇ ಬಾರಿಗೆ ಗರ್ಭಿಣಿಯಾದ ಇಬ್ಬರೂ ಪತ್ನಿಯರು

ಹೈದರಾಬಾದ್ : ಒಂದೇ ಬಾರಿಗೆ ಗರ್ಭಿಣಿಯಾದ ಇಬ್ಬರೂ ಪತ್ನಿಯರು

ಹೈದರಾಬಾದ್ : ಕೆಲವು ವಿಚಾರಗಳು ಬೆಚ್ಚಿಬೀಳುವಂತದ್ದು ,ಸಾಮಾಜಿಕ ಜಾಲತಾಣ ದಲ್ಲಂತೂ ನೆಟ್ಟಿಗರು ಕಾಲೆಳೆದು ಬಿಟ್ಟಿದ್ದಾರೆ ಹೈದರಾಬಾದ್ ಮೂಲದ ಮಾಡೆಲ್‌, ಸೋಷಿಯಲ್‌ ಮೀಡಿಯಾ ಸ್ಟಾರ್‌ ಅರ್ಮಾನ್ ಮಲಿಕ್ ಹೆಂಡತಿಯರ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಅರ್ಮಾನ್‌ಗೆ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್‌ ಎಂಬ ಇಬ್ಬರು ಪತ್ನಿಯರಿದ್ದಾರೆ. ಇದೀಗ ಅವರ ವಿಚಾರವಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು, ಅದೇನೆಂದರೆ ಒಂದು ಅರ್ಮಾನ್‌ ಒಂದು ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಇಬ್ಬರೂ ಪತ್ನಿಯರು ಒಂದೇ ಬಾರಿಗೆ ಗರ್ಭಿಣಿಯಾದರು ಎಂದು ಕಳೆದ ವಾರ ಅರ್ಮಾನ್‌ ಪೋಸ್ಟ್ ಮಾಡಿದ್ದರು. ಪೋಸ್ಟ್‌ನಲ್ಲಿ, ಅವರು ತಮ್ಮ ಇಬ್ಬರೂ ಪತ್ನಿಯರು ಗರ್ಭಿಣಿಯಾಗಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಜೊತೆ ‘ನನ್ನ ಕುಟುಂಬ’ ಎಂದು ಶೀರ್ಷಿಕೆ ಬರೆದಿದ್ದರು.

ಸಾಮಾಜಿಕ ಜಾಲತಾಣ ದಲ್ಲಂತೂ ಅರ್ಮಾನ್ ಮಲಿಕ್ ಹೆಂಡತಿಯರ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಅರ್ಮಾನ್‌ಗೆ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್‌ ಎಂಬ ಇಬ್ಬರು ಪತ್ನಿಯರಿದ್ದಾರೆ. ಅದರಲ್ಲೂ ೫ ವರ್ಷದ ಒಬ್ಬ ಮಗನೂ ಇದ್ದಾನೆ .ಇದೀಗ ಅವರ ವಿಚಾರವಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 15 ಲಕ್ಷ ಮತ್ತು ಯೂಟ್ಯೂಬ್‌ನಲ್ಲಿ 20 ಲಕ್ಷ ಫಾಲೋವರ್ಸ್ ಹೊಂದಿರುವ ಅರ್ಮಾನ್ ಇನ್‌ಸ್ಟಾಗ್ರಾಮ್ ಪೋಸ್ಟ್ ಇದಕ್ಕೆಲ್ಲ ಮೂಲ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular