ಮಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈಗ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ಸದ್ದಾಗಿದೆ , ಭ್ರಷ್ಟಾಚಾರದ ಬಗ್ಗೆ ಸುದ್ದಿ ಬರುತ್ತಿದ್ದ ಮೂಡ ಈವಾಗ ಲೈಂಗಿಕ ದಾಔರ್ಜನ್ಯದ ಸುದ್ದಿಯಾಗಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ವಿರುದ್ಧ ಮಹಿಳಾ ಉದ್ಯೋಗಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.
ಮಂಗೂರಿನ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಲಚೇರಿಯ ಹೊರಗುತ್ತಿಗೆ ಆಧಾರದಲ್ಲಿ ಬೆರಳಚ್ಚು ಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೂಡಾ ಆಯುಕ್ತ ಮನ್ಸೂರು ಅಲಿ ವಿರುದ್ಧ ಲೈಂಗಿಕ, ಮಾನಸಿಕ, ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ, ಜನವರಿ 6ರಂದು ಉರ್ವ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಐಪಿಸಿ ಸೆಕ್ಷನ್ 354, 354Aರಡಿ ಕೇಸ್ ದಾಖಲಿಸಿ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.


