Friday, March 13, 2026
Flats for sale
Homeಜಿಲ್ಲೆಮಂಗಳೂರು : ಯುವನಿಧಿ ನೋಂದಣಿ ಶಿಬಿರವನ್ನು ಜನವರಿ 8, 9 ರಂದು ನಡೆಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ...

ಮಂಗಳೂರು : ಯುವನಿಧಿ ನೋಂದಣಿ ಶಿಬಿರವನ್ನು ಜನವರಿ 8, 9 ರಂದು ನಡೆಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ.

ಮಂಗಳೂರು : ನಿರುದ್ಯೋಗಿ ಪದವೀಧರರು ಮತ್ತು ನಿರುದ್ಯೋಗಿ ಡಿಪ್ಲೋಮಾದಾರರಿಗೆ ಎರಡು ವರ್ಷಗಳವರೆಗೆ 1500 ರೂ.ನೀಡುವ ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಡಿಸಿ ಜ.8 ಮತ್ತು 9ರಂದು ಎಲ್ಲ ಪದವಿ ಕಾಲೇಜು ಹಾಗೂ ಡಿಪ್ಲೊಮಾ ಸಂಸ್ಥೆಗಳಲ್ಲಿ ನೋಂದಣಿ ಶಿಬಿರ ನಡೆಸುವಂತೆ ಸೂಚಿಸಿದ್ದಾರೆ. 2023 ರಲ್ಲಿ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಮತ್ತು ಉದ್ಯೋಗವನ್ನು ಪಡೆಯದಿರುವವರು ಅರ್ಹರು ಆಗಿರುತ್ತಾರೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular