Saturday, March 7, 2026
Flats for sale
Homeರಾಜ್ಯಬೆಂಗಳೂರು : ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತರ ಮೇಲಿನ 32 ಪ್ರಕರಣಕ್ಕೆ ಮರುಜೀವ: ಸರಕಾರದ ವಿರುದ್ಧ ಉಗ್ರ...

ಬೆಂಗಳೂರು : ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತರ ಮೇಲಿನ 32 ಪ್ರಕರಣಕ್ಕೆ ಮರುಜೀವ: ಸರಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಬಿಜೆಪಿ ಸಜ್ಜು .

ಬೆಂಗಳೂರು: ಹಳೆ ಪ್ರಕರಣಗಳನ್ನು ಕ್ಲಿಯರ್ ಮಾಡಲು ಸಂದೇಶ ಕೊಟ್ಟಿದ್ದೇವೆ. ರಾಜ್ಯದಲ್ಲಿರುವ ಎಲ್ಲಾ ಹಳೇ ಕೇಸ್‌ಗಳನ್ನೆಲ್ಲ ವರ್ಷಾನುಗಟ್ಟಲೇ ಇಟ್ಟುಕೊಂಡು, ತನಿಖೆ ಮಾಡದೆ ಇಟ್ಟು ಕೊಂಡಿರುವ ಬಗ್ಗೆ ಸ್ಟ್ಯಾಂಡಿಂಗ್ ಇನ್ಸ್ಪೆಕ್ಷನ್ ಕೊಟ್ಟಿದೆ. ಹುಬ್ಬಳ್ಳಿಯಲ್ಲಿ 32 ಕೇಸ್‌ಗಳು ಬಾಕಿ ಉಳಿದಿವೆ. ಈ ಎಲ್ಲ ಪ್ರಕರಣಗಳನ್ನು ಕ್ಲಿಯರ್ ಮಾಡಲು ಓಪನ್ ಮಾಡಿದ್ದಾರೆ. 32 ಪ್ರಕರಣಗಳಲ್ಲಿ ಒಂದಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಆದರೆ ಸರಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಹಿಂದೂ ಕಾರ್ಯಕರ್ತರ ಮೇಲೆ ದ್ವೇಷ ಸಾಧನೆ ನಿಲ್ಲಿಸದೇ ಹೋದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿ, ಹುಬ್ಬಳ್ಳಿಯ ಕೋಮು ಗಲಭೆ ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆದು ಕಸ್ಟಡಿಗೆ ಒಪ್ಪಿಸಿದ್ದಾರೆ. ೩೨ ಪ್ರಕರಣಗಳಂತೆ ಇದನ್ನು ಪರಿಗಣಿಸಲಾಗಿದೆ. ಇದಕ್ಕೆ ಬೇರೆ ಯಾವ ಉದ್ದೇಶವೂ ಇಲ್ಲ. ಹಿಂದೂ ಕಾರ್ಯಕರ್ತರು ಬೇರೆ ಸಂಘಟನೆ ಕಾರ್ಯಕರ್ತರು ಎಂದು ನಾವೇನು ಟಾರ್ಗೆಟ್ ಮಾಡಿಲ್ಲ. ಕಾನೂನು ಮೀರಿ ಏನು ಮಾಡಲಾಗುವುದಿಲ್ಲ, ಕಾನೂನು ಪ್ರಕಾರ ಏನು ಸಾಧ್ಯವೂ ಅದನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತದೆ. ಇದಕ್ಕೆ ಬಣ್ಣ ಕಟ್ಟುವುದು ಸರಿಯಲ್ಲ ಎಂದು ಹೇಳಿದರು.

ಆಕಸ್ಮಿಕ ಆಗಿರುವ ಪ್ರಕರಣ ಇದಾಗಿದೆ. ಯಾವುದೇ ಉದ್ದೇಶಪೂರ್ವಕವಾಗಿ ಆಗಿರುವುದಲ್ಲ. ಇದೊಂದೇ ಪ್ರಕರಣವನ್ನು ರಿಓಪನ್ ಮಾಡಿದ್ದರೆ ಉದ್ದೇಶಪೂರ್ವಕ ಎಂದು ಹೇಳಬಹುದಿತ್ತು ಬೇರೆ ಪ್ರಕರಣಗಳನ್ನು ತನಿಖೆ ಕೈಗೊಳ್ಳಲಾಗಿದೆ. ಬೇರೆ ಬೇರೆ ಹಳೆ ಪ್ರಕರಣಗಳನ್ನು ಎಲ್ಲಾ ಕ್ಲಿಯರ್ ಮಾಡುವ ಸಂದರ್ಭದಲ್ಲಿ ಈ ಪ್ರಕರಣವು ಒಂದು ಬಂದಿದೆ.

ಹಳೆ ಪ್ರಕರಣಗಳೆಲ್ಲವನ್ನು ಕ್ಲಿಯರ್ ಮಾಡೋ ಬಗ್ಗೆ ಸರ್ಕಾರದ ಸೂಚನೆ. ರಾಜ್ಯದಲ್ಲಿ ಸುಮಾರು ಪ್ರಕರಣಗಳು ಕಾರಣಾಂತರಗಳಿAದ ಹಾಗೆಯೇ ಬಾಕಿ ಉಳಿದಿವೆ ಎಂದು ಸಮರ್ಥಿಸಿಕೊಂಡರು.

ಧೈರ್ಯವಿದ್ದರೆ ಬಂಧಿಸಿ ಎಂದ ವಿಪಕ್ಷ ನಾಯಕ ಆರ್.ಅಶೋಕ್.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸುತ್ತಿದ್ದು, ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ. ಸರಕಾರಕ್ಕೆ ಧೈರ್ಯವಿದ್ದರೆ ನನ್ನನ್ನು ಹಾಗೂ ಕರಸೇವಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಮತ್ತೆ ದ್ವೇಷದ ರಾಜಕಾರಣ ಆರಂಭಿಸಿದೆ. ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯಾಗುತ್ತಿರುವ ಐತಿಹಾಸಿಕ ಕ್ಷಣಕ್ಕೆ ಜನರು ಕಾಯುತ್ತಿದ್ದು, ಕಾಂಗ್ರೆಸ್ ಮಾತ್ರ ಇದನ್ನು ಭಯವೆಂಬAತೆ ಬಿಂಬಿಸುತ್ತಿದೆ. ಇದೇ ವೇಳೆ ಹುಬ್ಬಳ್ಳಿಯಿಂದ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಇಬ್ಬರನ್ನು ೩೦ ವರ್ಷಗಳ ಹಿಂದಿನ ಪ್ರಕರಣ ಸಂಬAಧ ಜೈಲಿಗೆ ಕಳುಹಿಸಲಾಗಿದೆ. ನಾನು ಕೂಡ ಆಗ ಹೋರಾಟದಲ್ಲಿ ಭಾಗವಹಿಸಿದ್ದು, ನನ್ನನ್ನೂ ಬಂಧಿಸುತ್ತೀರಾ? ಅಷ್ಟು ಧೈರ್ಯ ಇದೆಯಾ? ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular