ಬೆಳಗಾವಿ : ಒಂದಲ್ಲ ಒಂದು ಸುದ್ದಿ ಬೆಳಗಾವಿಯಲ್ಲಿ ನಡೆಯುತ್ತಿದ್ದು ತಾಲೂಕಿನ ವಂಟಮೂರಿ ಗ್ರಾಮದ ಯುವಕ ಪ್ರೀತಿಸಿದ್ದ ಯುವತಿ ಜೊತೆ ರವಿವಾರ ಓಡಿ ಹೋಗಿದ್ದು ಇದರಿಂದ ಕೋಪಗೊಂಡ ಯುವತಿ ಕಡೆಯವರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ನಡುರಸ್ತೆಯಲ್ಲಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದ ಘಟನೆ ನಡೆದಿದೆ.
ಇದೊಂದು ಅಮಾನುಷ ಪ್ರಕರಣವಾಗಿದ್ದು ಪೊಲೀಸರು ಈಗಾಗಲೆ ಮಹಿಳೆಯರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಇನ್ನು ಹಲ್ಲೆಗೊಳಗಾದ ಮಹಿಳೆಯನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಮ್ಸ್ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ, ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿದರು. ಘಟನೆ ಬಗ್ಗೆ ಮಹಿಳೆ ಪತಿ ಲಗಮಣ್ಣ ಗಡ್ಕರಿಯಿಂದ ಮಾಹಿತಿ ಪಡೆದಿದ್ದಾರೆ.
ನನ್ನ ತಾಲೂಕಿನಲ್ಲೇ ಇಂತಹ ಘಟನೆ ಆಗಿದ್ದು ಖೇದಕರ,ರಾತ್ರಿ ಘಟನೆಯಾದ ಮೇಲೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ,ಇಡೀ ಮಾನವ ಕುಲ ತಲೆ ತಗ್ಗಿಸುವ ಕೆಲಸ ಇದು,ಕೃತ್ಯವೆಸಗಿದವರ ವಿರುದ್ಧ ಕಾನೂನಿನಡಿ ಕಠಿಣ ಶಿಕ್ಷೆ ಆಗಬೇಕು.ಎಂದು ಮಾಧ್ಯಮ ತಿಳಿಸಿದ್ದಾರೆ.
ಅನ್ಯಾಯಕ್ಕೊಳಗಾದ ಮಹಿಳೆಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಮಹಿಳೆಯ ಕುಟುಂಬದ ಬೇಡಿಕೆ ಏನಿದ್ದರೂ ಅದನ್ನು ಇಡೇರಿಸುತ್ತೇನೆ. ಅನ್ಯಾಯಕ್ಕೊಳಗಾದ ಮಹಿಳೆಯ ಕುಟುಂಬದ ಜತೆ ಸರ್ಕಾರ ಇದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ತಿಳಿವಳಿಕೆ ಇದ್ದವರು ಏಕೆ ಇಂತಹ ತಪ್ಪು ಮಾಡುತ್ತಾರೆ ಗೊತ್ತಾಗುತ್ತಿಲ್ಲ. ಮಹಿಳೆ ಮನಸ್ಸಿಗೆ ಘಾಸಿಯಾಗಿದೆ, ನಾನು ಅವರ ಬೆಂಬಲಕ್ಕಿದ್ದೇನೆ. ಸಖಿ ಒನ್ ಸ್ಟಾಪ್ ಅಡಿಯಲ್ಲಿ ಸಂತ್ರಸ್ತ ಮಹಿಳೆ ಪರವಾಗಿ ವಾದಿಸಲು ನಾವೇ ವಕೀಲರನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.


