ಗಂಗಾವತಿ : ನಗರದಲ್ಲಿ ಬೀದಿಗಳ ಕಸಗೂಡಿಸುವಿಕೆ, ಚರಂಡಿ ಸ್ವಚ್ಛತೆಯ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ. ನಗರಸಭೆಯ ಸಿಬ್ಬಂದಿ ದಿನಕ್ಕೆ ಎರಡು ಮೂರು ವಾಡರ್್ಗಳಲ್ಲಿ ಸಂಚರಿಸಿ ಸಮಸ್ಯೆ ಶಮನಕ್ಕೆ ಶ್ರಮಿಸುತಿದ್ದಾರೆ. ಅದಾಗ್ಯೂ ಕಸ ಮತ್ತು ಚರಂಡಿ ಸ್ವಚ್ಛತೆ ನಗರಸಭೆಗೆ ಸವಾಲಿನ ಕೆಲಸವಾಗುತ್ತಿದೆ.
ಜನ ಸಾಮಾನ್ಯರ ಮನೆಯ ಸುತ್ತಲೂ, ವಾಡರ್್ಗಳಲ್ಲಿ ಸ್ವಚ್ಛತೆ ಒತ್ತಟ್ಟಿಗೆ ಇರಲಿ, ತಾಲ್ಲೂಕು ಆಡಳಿತದ ಮುಖ್ಯಸ್ಥ ಅಂದರೆ ತಹಸೀಲ್ದಾರ್ ಒಬ್ಬರ ಮನೆಯ ಸುತ್ತಲೂ ಚರಂಡಿ ನೀರು ಸ್ಥಗಿತವಾಗಿದ್ದು, ದಿಗ್ಬಂಧನ ವಿಧಿಸಿದಂತಾದ ಘಟನೆ ನಗರದಲ್ಲಿ ನಡೆದಿದೆ.
ಕನಕಗಿರಿ ಮತ್ತು ಗಂಗಾವತಿಯ ಪ್ರಭಾರಿ, ತಹಸೀಲ್ದಾರ್ ವಿಶ್ವನಾಥ ಮುರಡಿ ಅವರ ಮನೆಯ ಸುತ್ತಲೂ ಇರುವ ಚರಂಡಿಯ ನೀರು ಸರಾಗವಾಗಿ ಹರಿಯದೇ ಬ್ಲಾಕ್ ಆಗಿದ್ದು, ಮನೆಗೆ ಪ್ರವೇಶಕ್ಕೆ ಅವಕಾಶವಿಲ್ಲದಂತೆ ದಿಗ್ಬಂಧನದಂತಾಗಿದೆ. ಕಾಲಿಟ್ಟರೆ ಸಾಕು ಇಡೀ ಏರಿಯಾದಲ್ಲಿ ಕಸಕಡ್ಡಿ ರಾಶಿ ಕಂಡು ಬರುತ್ತಿದೆ.
ನಗರಸಭೆಯ 20ನೇ ವಾಡರ್್ ಕಂಬಾಳಿಮಠ ಏರಿಯಾದಲ್ಲಿ ಬಹುತೇಕ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದ ಪರಿಣಾಮ ರಸ್ತೆಯ ಮೇಲೆಕ್ಕೆ ಚರಂಡಿ ನೀರು ಹರಿಯುತ್ತಿದೆ. ಹೀಗಾಗಿ ಇಡೀ ಏರಿಯಾದಲ್ಲಿ ಮಲೀನತೆ ಕಂಡು ಬರುತ್ತಿದೆ.
ಇದೇ ಪರಿಸರದಲ್ಲಿ ಜೈನ ಸಮಾಜಕ್ಕೆ ಸೇರಿದ ಬಾಬಾ ರಾಮ್ದೇವ ಮಂದಿರವಿದ್ದು, ಸುತ್ತಲೂ ಕಸಕಡ್ಡಿ ಸಂಗ್ರಹವಾಗಿದೆ. ಚರಂಡಿಯಲ್ಲಿ ಹರಿಯಬೇಕಿದ್ದ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಪರಿಣಾಮ ನಾನಾ ಕೆಲಸ ಕಾರ್ಯಗಳಿಗಾಗಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಮನೆಗೆ ಹೋಗಬೇಕಿದ್ದ ಸಾರ್ವಜನಿಕರು, ಇಲಾಖೆಯ ಸಿಬ್ಬಂದಿ ವರ್ಗ ಓಣಿಯಲ್ಲಿ ಮೂಗುಮುಚ್ಚಿಕೊಂಡು ಓಡಾಡುವ ಸನ್ನಿವೇಶ ನಿಮರ್ಾಣವಾಗಿದೆ.
ಕಳೆದ 20 ವರ್ಷದ ಹಿಂದೆ ನಿಮರ್ಾಣ ಮಾಡಲಾಗಿರುವ ಚರಂಡಿಯಲ್ಲಿ ಸಾಕಷ್ಟು ಮಣ್ಣು ತುಂಬಿದ್ದು ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಓಣಿಯಲ್ಲಿರುವ ರಸ್ತೆ ಮತ್ತು ಚರಂಡಿ ಸಮಾನಂತರವಾಗಿರುವ ಕಾರಣಕ್ಕೆ ಚರಂಡಿಯಲ್ಲಿ ನೀರು ಸ್ಥಗಿತವಾಗಿ ರಸ್ತೆಗೆ ಬರುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಹತ್ತಾರು ಬಾರಿ ಗಮನಕ್ಕೆ:
`ಓಣಿಯಲ್ಲಿ ಹೊಸ ಚರಂಡಿ, ರಸ್ತೆ ನಿಮರ್ಾಣ ಮಾಡಬೇಕಿದೆ. ಅಲ್ಲಿವರೆಗೂ ಚರಂಡಿ ತುಂಬಿ ರಸ್ತೆಗೆ ಹರಿಯದಂತೆ ಆಗಾಗ ಸ್ವಚ್ಛಗೊಳಿಸುವಂತೆ ನಗರಸಭೆಯ ಪೌರಾಯುಕ್ತರಿಗೆ ಹಲವು ಬಾರಿ ತಿಳಿಸಲಾಗಿದೆ. ಅಲ್ಲದೇ ನಗರ ಯೋಜನಾ ನಿದರ್ೇಶಕಿ ಅವರ ಗಮನಕ್ಕೂ ತರಲಾಗಿದೆ. ಆದರೆ ಯಾವ ಪ್ರಯೋಜನವಾಗಿಲ್ಲ,. ಇದರಿಂದ ನನಗಷ್ಟೆ ಸಲ್ಲ, ಸಕರ್ಾರಿ ಕೆಲಸ ಕಾರ್ಯಕ್ಕೆ ಎಂದು ಬರುವ ಇಲಾಖೆಗಳ ಸಿಬ್ಬಂದಿ, ಜನಸಾಮಾನ್ಯರಿಗೆ ಮತ್ತು ಓಣಿಯ ಜನರಿಗೆ ಇನ್ನಿಲ್ಲದ ಸಮಸ್ಯೆ ನಿಮರ್ಾಣವಾಗಿದೆ ಎಂದು ತಹಸೀಲ್ದಾರ್ ವಿಶ್ವನಾಥ ಮುರಡಿ ಹೇಳಿದ್ದಾರೆ.
ಶೀಘ್ರ ಕಾಮಗಾರಿ:
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಾಡರ್ಿನ ಸದಸ್ಯೆ ಜಯಶ್ರೀ ಸಿದ್ದಾಪುರ, ಈ ಸಮಸ್ಯೆ ಪರಿಹಾರಕ್ಕೆ ನಗರೋತ್ಥಾನದಲ್ಲಿ ಅನುದಾನ ಮೀಸಲಿಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಆರಂಭವಾಗಿಲ್ಲ.
ರಸ್ತೆ ಮತ್ತು ಚರಂಡಿ ನಿಮರ್ಾಣಕ್ಕೆ 1.20 ಕೋಟಿ ಮೊತ್ತದ ಅನುದಾನ ಮೀಡಲಿಸಲಾಗಿದೆ.
ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾಗಿ ಪೌರಾಯುಕ್ತರನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ಅವರ ಗಮನಕ್ಕೆ ತರಲಾಗುವುದು. ಶೀಘ್ರ ನಗರೋತ್ಥಾನ ಕಾಮಗಾರಿ ಆರಂಭವಾಗಲಿದ್ದು, ಅಲ್ಲಿವರೆಗೂ ನಿಗಧಿತವಾಗಿ ಚರಂಡಿ ಕ್ಲೀನ್ ಮಾಡಿಸಿ, ಬ್ಲೀಚಿಂಗ್ ಪೌಡರ್ ಹಾಕಿಸಲಾಗುವುದು ಎಂದರು.
ಚರಂಡಿ ಒತ್ತುವರಿ:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೌರಾಯುಕ್ತ ಆರ್. ವಿರೂಪಾಕ್ಷಮೂತರ್ಿ, 20ನೇ ವಾಡರ್ಿನ ಹಳೇಯ ಏರಿಯಾದಲ್ಲಿ ಬಹುತೇಕರು ಚರಂಡಿ ಒತ್ತುವರಿ ಮಾಡಿಕೊಂಡು ಮನೆ ನಿಮರ್ಾಣ ಮಾಡಿಕೊಂಡಿದ್ದಾರೆ. ಇದರಿಂದ ಸ್ವಚ್ಛತೆಗೆ ತೊಂದರೆಯಾಗುತ್ತಿದೆ.
ಈ ಹಿಂದೆ ಸಮಸ್ಯೆ ಗಮನಕ್ಕೆ ಬಂದಾಗ ಎರಡ್ಮೂರು ಬಾರಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈಗ ಮತ್ತೆ ಭೇಟಿ ನೀಡುತ್ತೇನೆ. ಚರಂಡಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ರಸ್ತೆ, ಚರಂಡಿ ನಿಮರ್ಾಣಕ್ಕೆಂದು ಈ ಹಿಂದೆ ಒಂದುವರೆ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿತ್ತು ಎಂದು ಪೌರಾಯುಕ್ತ ತಿಳಿಸಿದರು.


