ಕಾರ್ಕಳ ; ಕಾರ್ಕಳದಲ್ಲಿ 33 ಅಡಿ ಎತ್ತರದ ಪರಶುರಾಮ ಥೀಮ್ ಪಾರ್ಕ್ ಯೋಜನೆ ತಲೆ ಎತ್ತುತಿದೆ.

ಕಾರ್ಕಳ ತಾಲೂಕಿನಲ್ಲಿ ತಲೆಎತ್ತುತಿದೆ ದೇಶದ ಅತೀದೊಡ್ಡ ಪರಶುರಾಮ ವಿಗ್ರಹ. ಸುಮಾರು 10 ಕೋಟಿ ವೆಚ್ಚದಲ್ಲಿ ಬರಲಿದೆ ಪರಶುರಾಮ ಥೀಮ್ ಪಾರ್ಕ್ ಯೋಜನೆ .ಹಾಗೂ 33 ಅಡಿ ಎತ್ತರದ ದಿವ್ಯವಾದ ಕಂಚಿನ ಪ್ರತಿಮೆ ಮುಂದೆ ಸ್ಥಾಪನೆ ಯಾಗುತ್ತದೆ.

ಕಾರ್ಕಳ ಶಾಸಕ ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಕಾರ್ಕಳ ವನ್ನು ಪ್ರವಾಸೋದ್ಯಮ ಕ್ಷೇತ್ರದ ರೂಪಾಂತರ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸುಮಾರು 10 ಕೋಟಿ ರೂಪಾಯಿಯ ಯೋಜನೆ ಉಡುಪಿಯಿಂದ ಕಾರ್ಕಳ ಕ್ಕೆ ಹೋಗುವ ರಾಷ್ತ್ರೀಯ ಹೆದ್ದಾರಿ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ಮಧ್ಯೆ ಬಂಡೆಕಲ್ಲಿನ ಮಧ್ಯೆ 33 ಅಡಿ ಎತ್ತರದ ಪರಶುರಾಮನ ಇಡೀ ತಾಲೂಕು ಕಣ್ಣಿಟ್ಟು ನೋಡುವಂತಹ ಕಾಮಗಾರಿ ಕೊನೆಯ ಅಂತಕ್ಕೆ ತಲುಪಿದ್ದು ಇನ್ನೇನು ಕೆಲವೆ ದಿನಗಳಲ್ಲಿ ಉದ್ಘಾಟನೆ ಯಾಗಲಿದೆ.
ಈ ಉಮಿಕಲ್ ಬೆಟ್ಟ ಸಮುದ್ರ ಮಟ್ಟಕ್ಕಿತ 500 ಅಡಿ ಎತ್ತರದಲ್ಲಿದೆ. ಇಲ್ಲಿ ಬರುವ ಪ್ರವಾಸಿಗರಿಗೆ 1000 ಜನ ಆಸಿನರಾಗುವ ವ್ಯವಸ್ಥೆ ಇದೆ ಹಾಗೂ ತೆರೆದ ರಂಗ ಮಂದಿರ, ಪರಶುರಾಮರ ಚರಿತ್ರೆ ನೋಡುವ ವ್ಯವಸ್ಥೆ ಇದೆ…
ಪರಶುರಾಮನ ಕಂಚಿನ ಪ್ರತಿಮೆ.
ಇಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಮ್ಯೂಸಿಯಂ ಹಾಗೂ ರೆಸ್ಟೋರೆಂಟ್ ವ್ಯವಸ್ಥೆ ಇದೆ.
ಈ ಯೋಜನೆಯ ಮಾಸ್ಟರ್ ಮೈಂಡ್ ಉಡುಪಿಯ ಯುವ ವಿನ್ಯಾಸಗಾರ ಎ.ಆರ್ ಸಂಪ್ರೀತ್ ರಾವ್ . ಸುಮಾರು 100 ಅಡಿ ಎತ್ತರದ ಬಂಡೆಕಲ್ಲಿನ ನಡುವೆ ಸುತ್ತಮುತ್ತಲ ಪರಿಸರ ಉಳಿಸುವ ದೃಷ್ಟಿಯಿಂದ ಮರಗಳನ್ನು ಕಡಿಯದೆ ನೈಪುಣ್ಯತೆ ಉಪಯೋಗಿಸಿ ಕಾಮಗಾರಿ ನಡೆಸಲಾಗಿದೆ.
ಪುರಾಣದ ಆದಾರದ ಮೇಲೆ ಪರಶುರಾಮ ಥೀಮ್ ಪಾರ್ಕ್.
ವಿಷ್ಣುವಿನ ಅವತಾರವಾಗಿರುವ ಪರಶುರಾಮ ಪಶ್ಚಿಮ ಘಟ್ಟದ ಮೇಲೆ ನಿಂತು ತನ್ನ ಕೊಡಲಿಯನ್ನು ಅರಬ್ಬೀ ಸಮುದ್ರಕ್ಕೆ ಎಸೆದ ಕಥೆಯಿಂದ ಸಮುದ್ರರಾಜ ಭೂಮಿಯನ್ನು ಬಿಟ್ಟು ಕೊಟ್ಟು ಕರಾವಳಿ ಪ್ರದೇಶ ಸೃಷ್ಟಿ ಯಾಗಿರೊದು ಎಲ್ಲಾ ಪುರಾಣಗಳಲ್ಲಿ ಇದೆ. ಪರಶುರಾಮನ ಚರಿತ್ರೆಗೆ ಮಹತ್ತ್ವ ಗೊಳಿಸಲು ಈ ಥೀಮ್ ಪಾರ್ಕನ್ನು ರಚಿಸಲಾಗಿದೆ. ಒಂದು ಕೈಯಲ್ಲಿ ಕೊಡಲಿ ಇನ್ನೊಂದು ಕೈಯಲ್ಲಿ ಧನಸ್ಸು ಎತ್ತಿ ವಿರಾವೇಷದಿಂದ ಮೇರೆಯುವ ರೂಪದಲ್ಲಿರುವ ಈ ವಿಗ್ರಹ ರಚಿಸಲಾಗಿದೆ.
ಈ ತಿಂಗಳ 25 ತಾರೀಕನ ಒಳಗಡೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರು ಲೋಕಾರ್ಪನೆಗೊಳಿಸಲಿದ್ದಾರೆ ಎಂಬುದು ಸುದ್ದಿ.
ಖ್ಯಾತ ಶಿಲ್ಪಿ ಕೃಷ್ಣ ನಾಯಕ್ ರವರು ಈ 33 ಅಡಿ ಎತ್ತರದ ಕಂಚಿನ ವಿಗ್ರಹ ನಿರ್ಮಿಸಿದ್ದಾರೆ. ಆರ್ಟ್ ಮ್ಯೂಸಿಯಂ ನಲ್ಲಿ ಪರಶುರಾಮರ ಜೀವನ ಚರಿತ್ರೆಯನ್ನು ಬಿಂಬಿಸುವ ಫೈಬರ್ ಗ್ಲಾಸ್ ಒಳಗೆ ಇರುವ ಉಬ್ಬು ಚಿತ್ರವನ್ನು ಪುರುಷೋತ್ತಮ ಅಡ್ವೆಯರು ರಚಿಸಿದ್ದಾರೆ.
ಕಾರ್ಕಳವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಪ್ರವಾಸ್ಸೋದ್ಯಮ ಇಲಾಖೆಯಿಂದ 6.50 ಕೋಟಿ ,ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಪಿಟಿಸಿಎಲ್ ನ ಸಿಎಸ್ಅರ್ ಫಂಡ್ ನಿಂದ 1 ಕೋಟಿ ಅನುದಾನ ಪಡೆಯಲಾಗಿದೆ.