Tuesday, October 21, 2025
Flats for sale
Homeಕ್ರೈಂಹುಬ್ಬಳ್ಳಿ : ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಬಾಲಕರ ನಡುವೆ ಜಗಳ : 9ನೇ ತರಗತಿಯ ಸ್ನೇಹಿತನನ್ನೇ...

ಹುಬ್ಬಳ್ಳಿ : ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಬಾಲಕರ ನಡುವೆ ಜಗಳ : 9ನೇ ತರಗತಿಯ ಸ್ನೇಹಿತನನ್ನೇ ಇರಿದು ಕೊಂದ 12 ವರ್ಷದ ಬಾಲಕ.!

ಹುಬ್ಬಳ್ಳಿ : ದ್ವೇಷ ಯಾವ ರೀತಿ ಹುಟ್ಟುತ್ತದೆಂಬುದಕ್ಕೆ ಈ ಪ್ರಕರಣವೇ ಉತ್ತಮ ನಿದರ್ಶನ.ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಆದ್ರೆ, ಅದೇನಾಯ್ತೋ ಏನೋ ಆಟವಾಡುತ್ತಿದ್ದಾಗಲೇ ಇಬ್ಬರು ಬಾಲಕರು ಜಗಳ ಮಾಡಿಕೊಂಡಿದ್ದು, ಕೊನೆಗೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಚೇತನ್ (14) ಹತ್ಯೆಯಾದ ಬಾಲಕ ಎಂದು ತಿಳಿದು ಬಂದಿದೆ.

ಮೇ ೧೨ ರಂದು ಸಂಜೆ ಆಟವಾಡುವಾಗ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ಜಗಳದಲ್ಲಿ 15 ವರ್ಷದ ಬಾಲಕ ಚೇತನ್‌ಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಹುಬ್ಬಳ್ಳಿ ನಗರದ ಗುರುಸಿದ್ದೇಶ್ವರ ನಗರದಲ್ಲಿ ನಡೆದಿದ್ದು, ಗುರುಸಿದ್ದೇಶ್ವರ ನಗರದ ನಿವಾಸಿಯಾಗಿರೋ ಹದಿನೈದು ವರ್ಷದ ಚೇತನ್ ರಕ್ಕಸಗಿ ಕೊಲೆಯಾದ ಬಾಲಕ. ಇನ್ನು ಕೊಲೆ ಮಾಡಿದ್ದು, ಆತನ ಮನೆ ಮುಂದೆಯೇ ಇರು ಗೆಳೆಯ ಹದಿಮೂರು ವರ್ಷದ ಬಾಲಕನಾಗಿದ್ದಾನೆ.

ಅವರಿಬ್ಬರು ಅಪ್ರಾಪ್ತ ಬಾಲಕರು. ಇಬ್ಬರು ಕೂಡಾ ಸ್ನೇಹಿತರು. ಪ್ರತಿ ದಿನ ಕೂಡಿಯೇ ಆಟವಾಡುತ್ತಿದ್ದು, ಅಚ್ಚರಿ ಅಂದ್ರೆ ಆರನೇ ತರಗತಿ ಹುಡಗು ತನಗಿಂತ ಮೂರು ಕ್ಲಾಸ್ ಮುಂದಿದ್ದ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದವನನ್ನೇ ಕೊಂದಿದ್ದಾನೆ. ಈ ಪ್ರಕರಣದಿಂದ ಪೊಲೀಸರೇ ಶಾಕ್​ ಆಗಿದ್ದಾರೆ.ಮನೆಯಿಂದ ಚಾಕುತಂದು, ಚೇತನ್ ನ ಹೊಟ್ಟೆಯ ಎಡಬಾಗದಲ್ಲಿ ಇರದಿದ್ದಾನೆ. ಚಾಕು ಇರಿಯುತ್ತಿದ್ದಂತೆ ಚೇತನ್ ಕುಸಿದು ಬಿದ್ದಿದ್ದಾನೆ. ಮಕ್ಕಳೆಲ್ಲರು ಚೀರುತ್ತಿದ್ದಂತೆ, ಕೊಲೆ ಮಾಡಿದ ಬಾಲಕನ ತಾಯಿ ಓಡಿ ಬಂದು, ಚೇತನ ನೆರವಿಗೆ ಬಂದಿದ್ದಾರೆ. ಕೂಡಲೇ ಚೇತನ್ ನನ್ನು, ಕೊಲೆ ಮಾಡಿದ ಬಾಲಕನ ತಾಯಿಯೇ ಕರೆದುಕೊಂಡು ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ಆಸ್ಪತ್ರೆ ಸೇರುವ ಮುನ್ನವೇ ಚೇತನ್ ಬಾರದ ಲೋಕಕ್ಕೆ ಹೋಗಿದ್ದಾನೆ.

ಚೇತನ್ ಈಗಷ್ಟೇ ಒಂಬತ್ತನೇ ತರಗತಿ ಪಾಸ್ ಆಗಿದ್ದ. ಕೊಲೆ ಮಾಡಿದ ಬಾಲಕ ಆರನೇ ತರಗತಿ ಪಾಸ್ ಉತ್ತೀರ್ಣನಾಗಿದ್ದು, ಇಬ್ಬರು ಎದುರು ಬಿದುರು ಮನೆಯ ಸ್ನೇಹಿತರು. ಸದ್ಯ ರಜೆ ಇದ್ದಿದ್ದರಿಂದ, ಎಲ್ಲಾ ಬಾಲಕರು ಸೇರಿದಕೊಂಡು ರಜಾ ದಿನಗಳನ್ನು ಮಜಾ ಮಾಡುತ್ತಿದ್ದರು.ಘಟನೆಗೆ ಸಂಬಂಧಿಸಿದಂತೆ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು “ಗುರುಸಿದ್ದೇಶ್ವರ ನಗರದಲ್ಲಿ ಬಾಲಕರಿಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಓರ್ವ ಬಾಲಕ ಮನೆಗೆ ಹೋಗಿ ಚಾಕು ತಂದು ಇನ್ನೊಬ್ಬನಿಗೆ ಇರಿದಿದ್ದಾನೆ. ಕೂಡಲೇ ಇರಿದ ಬಾಲಕನ ತಾಯಿ ಇರಿತಕ್ಕೊಳಗಾದ ಬಾಲಕನ್ನು ಆಸ್ಪತ್ರೆಗೆ ಕರೆತಂದಿದ್ದಾಳೆ. ಕಿಮ್ಸ್ ಗೆ ಕರೆ ತಂದಾಗ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಹೃದಯ ವಿದ್ರಾವಕ ಘಟನೆ” ಮಕ್ಕಳು ಈ ಮಟ್ಟಕ್ಕೆ ಇಳಿದಿರುವುದು ಸಮಾಜ ತಲೆತಗ್ಗಿಸುವಂತಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular