Sunday, July 19, 2026
Homeರಾಜ್ಯಬೆಳಗಾವಿ ; ಕರ್ನಲ್ ಸೋಫಿಯಾ ಗಂಡನ ಮನೆ ಮೇಲೆ ಅಟ್ಯಾಕ್ ಎಂದು X ಖಾತೆಯಲ್ಲಿ ಸುಳ್ಳು...

ಬೆಳಗಾವಿ ; ಕರ್ನಲ್ ಸೋಫಿಯಾ ಗಂಡನ ಮನೆ ಮೇಲೆ ಅಟ್ಯಾಕ್ ಎಂದು X ಖಾತೆಯಲ್ಲಿ ಸುಳ್ಳು ಸುದ್ದಿ,ಅನಿಸ್ ಉದ್ದೀನ್ ಮೇಲೆ ಪ್ರಕರಣ ದಾಖಲು ..!

ಬೆಳಗಾವಿ ; ಆಪರೇಷನ್ ಸಿಂಧೂರ ಬಗ್ಗೆ ಜಗತ್ತಿಗೆ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಕರ್ನಾಟಕ ಸೊಸೆ ಸೋಫಿಯಾ ಗಂಡನ ಮನೆ R.S.S ನವರು ಮೇಲೆ ಅಟ್ಯಾಕ್ ಆಗಿದೆ ಎಂದು ಎಂದು X ಖಾತೆಯಲ್ಲಿ ಮುಸ್ಲಿಂ ಯುವಕ ಸುಳ್ಳು ಸುದ್ದಿ ಹರಡಿದ ಘಟನೆ ಬೆಳಕಿಗೆ ಬಂದಿದೆ. ಸುಳ್ಳು ಸುದ್ದಿ‌ ನಂಬದಂತೆ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಮನವಿ ಮಾಡಿದ್ದೂ ಅನಿಸ್ ಉದ್ದೀನ್ ಎಂಬಾತನಿಂದ X ಖಾತೆಯಲ್ಲಿ ಸೋಫಿಯಾ ಖುರೇಷಿ ಗಂಡನ ಮನೆ ಮೇಲೆ R.S.S ನವರು ಅಟ್ಯಾಕ್ ಮಾಡಿದೆ ಎಂದು ಪೋಸ್ಟ್ ಹಾಕಿದ್ದಾನೆ.

ಕರ್ನಲ್ ಸೋಫಿಯಾ ಪೋಟೋ ಜೊತೆಗೆ ಮನೆಯನ್ನ ಧ್ವಂಸ ಮಾಡಿರೋ ಯಾವುದೋ ಹಳೆ ಪೋಟೋ X ಖಾತೆಯಲ್ಲಿ ಪೋಸ್ಟ್ ಮಾಡಿದ್ದೂ ವಿಚಾರ ಗೊತ್ತಾಗುತ್ತಿದ್ದಂತೆ ಸೋಫಿಯಾ ಗಂಡನ ಮನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಆರೋಪಿ ಅನಿಸ್ ಉದ್ದೀನ್ ಸುಳ್ಳು ಸುದ್ದಿ ಪೋಸ್ಟ್ ಡಿಲಿಟ್ ಮಾಡಿದ್ದು ಸೋಫಿಯಾ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಮನೆ ಮೇಲೆ ಯಾವುದೇ ಅಟ್ಯಾಕ್ ಆಗಿಲ್ಲ ಆದರೂ ಸುರಕ್ಷತಾ ಕ್ರಮವಾಗಿ ಸೋಫಿಯಾ ಮನೆಗೆ ಪೊಲೀಸ್ ರಕ್ಷಣೆ ಒದಗಿಸಿದ ಗೋಕಾಕ ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular