ಹಾಸನ ; ಚಲಿಸುತ್ತಿದ್ದ ಸಾರಿಗೆ ಬಸ್‌ನ ಹಿಂದಿನ ಚಕ್ರಗಳು ಕಳಚಿ ಅದೃಷ್ಟವಶಾತ್ ಬಾರಿ ಅನಾಹುತ ತಪ್ಪಿದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬ್ಯಾದನೆ ಗ್ರಾಮದಲ್ಲಿ ನಡೆದಿದೆ.
ಸಾರಿಗೆ ಬಸ್ಸಿನಲ್ಲಿ ನಲವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದು ಸಕಲೇಶಪುರದಿಂದ ಬೇಲೂರಿಗೆ ತೆರಳುತ್ತಿದ್ದ KA-18 F 0548 ನಂಬರ್‌ನ ಚಿಕ್ಕಮಗಳೂರು ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಬಸ್ಸ್ ಇದಾಗಿದೆ.
ಬಸ್‌ನ ಹಿಂದಿನ ಚಕ್ರಗಳು ಕಳಚಿ ಬೀಳುತ್ತಿದ್ದಂತೆ ಚಾಲಕನ ಸಮಯ ಪ್ರಜ್ಞೆ ಯಿಂದ ಬಾರಿ ದೊಡ್ಡ ವಾನಾಹುತ ತಪ್ಪಿದ್ದು ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಅಪಾಯದಿಂದ ಚಾಲಕ ಪಾರು ಮಾಡಿದ್ದಾರೆ.ಬಳಿಕ ಬೇರೆ ವಾಹನದಲ್ಲಿ ಪ್ರಯಾಣಿಕರನ್ನು ಕಳುಹಿಸಿದ್ದಾರೆಂದು ಮಾಹಿತಿ ದೊರೆತಿದೆ.