ಹಾಸನ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಆರಗೋಡನಹಳ್ಳಿ ಗ್ರಾಮದ ರೈತ ರಾಜೇಗೌಡರ ಮನೆ ಹಿಂಬಾಗ ರಾಜೇಗೌಡ ದಂಪತಿಗಳು ಹಾಗೂ ಮಹಿಳೆ ಒಬ್ಬರ ಮೇಲೆ ಕಾಡು ಹಂದಿ ದಾಳಿ ನಡೆಸಿದ ಕಾರಣ ರೈತರಾದ ರಾಜೇಗೌಡರು (63) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಹಳ್ಳಿ ಮೈಸೂರು ಹೋಬಳಿ ಆರಗೌಡನಹಳ್ಳಿ ಗ್ರಾಮದ ರೈತ ರಾಜೇಗೌಡ ಕಾಂತಮ್ಮ ವೃದ್ಧ ದಂಪತಿಗಳು ಜಮೀನಿಗೆ ನೀರು ಹಾಯಿಸಲು ತೆರಳಿದ ಸಂದರ್ಭದಲ್ಲಿ ದಾಳಿ ನಡೆಸಿ ರಾಜೇಗೌಡರನ್ನು ಕೊಂದು, ಶಾಂತಮ್ಮ ಅವರನ್ನು ಗಂಭೀರವಾಗಿ ಗಾಯಗೊಳಿಸಿದೆ, ಶಾಂತಮ್ಮನವರ ಕೈ ಹಾಗೂ ಕಾಲಿನ ಮೂಳೆಗಳು ತುಂಡಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬಿಡಿಸಲು ಹೋದ ನಂಜಮ್ಮ ಎಂಬ ಮಹಿಳೆಯ ಮೇಲು ಕಾಡು ಹಂದಿ ದಾಳಿ ನಡೆಸಿದ್ದು ನಂಜಮ್ಮ ಅವರು ಗಾಯಗೊಂಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ತನಕ ಮೃತದೇಹ ಸ್ಥಳದಿಂದ ಸಾಗಿಸಲು ಬಿಡೊಲ್ಲ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.


