Saturday, May 2, 2026
Flats for sale
Homeಜಿಲ್ಲೆಸುರತ್ಕಲ್ : ಕೊಡಿಪಾಡಿ ಶ್ರೀ ಕೊಡಮಣಿತ್ತಾಯ – ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ.

ಸುರತ್ಕಲ್ : ಕೊಡಿಪಾಡಿ ಶ್ರೀ ಕೊಡಮಣಿತ್ತಾಯ – ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ.

ಸುರತ್ಕಲ್ : ಸುರತ್ಕಲ್‌ನ ಕೊಡಿಪಾಡಿ ಪ್ರದೇಶದಲ್ಲಿರುವ ಶ್ರೀ ಕೊಡಮಣಿತ್ತಾಯ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಧಾರ್ಮಿಕ ಸಂಭ್ರಮದ ನಡುವೆ ಗುರುವಾರ ಜರಗಿತು.

ಕ್ಷೇತ್ರದ ತಂತ್ರಿಗಳಾದ ಮಿಜಾರು ಪುಮಾವರ ಗುತ್ತು ದಿನೇಶ್ ಪೇಜತ್ತಾಯ ಅವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ನೆರವೇರಿದವು. ಬೆಳಿಗ್ಗೆ ವಿಶೇಷ ಪೂಜೆ ಮತ್ತು ಆರಾಧನೆಗಳ ಬಳಿಕ ಸುಮuhur್ತದಲ್ಲಿ ನೂತನ ಆಲಯಗಳಲ್ಲಿ ಶ್ರೀ ಧರ್ಮರಸು ಉಳ್ಳಾಯ, ಶ್ರೀ ಕೊಡಮಣಿತ್ತಾಯ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಮಾಯಂದಾಲೆ ದೈವಗಳ ಪುನರ್ ಪ್ರತಿಷ್ಠೆ ನಡೆಯಿತು.

ಕಲಶ ಪೂಜೆಯ ನಂತರ ಬ್ರಹ್ಮಕಲಶ ಅಭಿಷೇಕ, ಕೊಡಿಮರ ಪ್ರತಿಷ್ಠೆ, ಕಲಶ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಭಕ್ತರಿಗೆ ದೈವದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಪಲ್ಲ ಪೂಜೆಯ ನಂತರ ಮಧ್ಯಾಹ್ನ 1 ಗಂಟೆಯಿಂದ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಗಡಿ ಪ್ರಧಾನರಾದ ಜಗನ್ನಾಥ ಅತ್ತಾರ್ ಸೇರಿದಂತೆ ವಿವಿಧ ದೈವಾಲಯಗಳ ಗಡಿ ಪ್ರಧಾನರು, ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ, ಉಪಾಧ್ಯಕ್ಷ ಸತೀಶ್ ಮುಂಚೂರು, ಗೌರವಾಧ್ಯಕ್ಷ ಭುಜಂಗ ಶೆಟ್ಟಿ ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.

ಇಂದಿನಿಂದ ನೇಮೋತ್ಸವ ಆರಂಭ

ಮೇ 1ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಧರ್ಮರಸು ಉಳ್ಳಾಯ ನೇಮ, ರಾತ್ರಿ 8 ಗಂಟೆಗೆ ಶ್ರೀ ಕೊಡಮಣಿತ್ತಾಯ ನೇಮ ನಡೆಯಲಿದೆ. ಮೇ 2ರಂದು ರಾತ್ರಿ 8 ಗಂಟೆಯಿಂದ ಶ್ರೀ ಬ್ರಹ್ಮ ಬೈದರ್ಕಳ ಮಾಯಂದಾಲೆ ನೇಮ ನಡೆಯಲಿದ್ದು, ಮೇ 3ರಂದು ಬೆಳಿಗ್ಗೆ 6 ಗಂಟೆಗೆ ಧ್ವಜಾವರೋಹಣದೊಂದಿಗೆ ಕಾರ್ಯಕ್ರಮಗಳು ಸಮಾಪ್ತಿಗೊಳ್ಳಲಿವೆ. ಸುಮಾರು ₹3.50 ಕೋಟಿ ವೆಚ್ಚದಲ್ಲಿ ಧ್ವಜಸ್ತಂಭ, ರಾಜಗೋಪುರ, ಪ್ರಧಾನ ಮಹಾದ್ವಾರ, ತೀರ್ಥಕೆರೆ, ವಸಂತಕಟ್ಟೆ ಹಾಗೂ ವಿವಿಧ ದೈವಸ್ಥಾನಗಳ ಪುನರ್ ನಿರ್ಮಾಣ ಕಾರ್ಯಗಳು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular