Saturday, July 25, 2026
Homeಜಿಲ್ಲೆಸುರತ್ಕಲ್ : ಒಳಚರಂಡಿ ಕಾಮಗಾರಿ ವೇಳೆ ಕಾಂಪೌಂಡ್ ಗೋಡೆ ಕುಸಿದು ಓರ್ವ ಸಾವು, ಮತ್ತೋರ್ವನಿಗೆ ಗಾಯ.

ಸುರತ್ಕಲ್ : ಒಳಚರಂಡಿ ಕಾಮಗಾರಿ ವೇಳೆ ಕಾಂಪೌಂಡ್ ಗೋಡೆ ಕುಸಿದು ಓರ್ವ ಸಾವು, ಮತ್ತೋರ್ವನಿಗೆ ಗಾಯ.

ಸುರತ್ಕಲ್ : ಸುರತ್ಕಲ್‌ನ ಕೃಷ್ಣಾಪುರದಲ್ಲಿ ಬುಧವಾರದಂದು ಸುರತ್ಕಲ್‌ನ ಕೃಷ್ಣಾಪುರದಲ್ಲಿಒಳಚರಂಡಿ ಕಾಮಗಾರಿ ವೇಳೆ ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿ ಬಜ್ಪೆ ಕರಂಬಾರುವಿನ ಹನೀಫ್ ಎಂದು ಗುರುತಿಸಲಾಗಿದೆ ,ಮತ್ತೋರ್ವ ವ್ಯಕ್ತಿ ಮಣಿ ಎಂಬವರು ಗಾಯಗೊಂಡಿದ್ದಾರೆ. ಕೃಷ್ಣಾಪುರದ ಷರೀಫ್ ಅವರು ಒಳಚರಂಡಿ  ಕಾಮಗಾರಿ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿದ್ದ ವೇಳೆ ಏಕಾಏಕಿ ಕಾಂಪೌಂಡ್ ಗೋಡೆ ಕುಸಿದು ಕೂಲಿಕಾರರ ಮೇಲೆ ಬಿದ್ದಿದೆ.

ಅವಶೇಷಗಳಡಿಯಿಂದ ಮೇಲೆತ್ತುವಷ್ಟರಲ್ಲಿ ಹನೀಫ್ ಮೃತಪಟ್ಟಿದ್ದರು. ಮಣಿಯನ್ನು ಮುಕ್ಕಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುರತ್ಕಲ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular