ಶಿರಾ : ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಬಸ್‌ಗಳು ಯಾವಾಗಲೂ ಫುಲ್ ಇರುತ್ತವೆ. ಬಸ್ ಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗ ಸಿಗುತ್ತಿಲ್ಲ, ಮುಂಜಾನೆಯ ವೇಳೆ ಬಸ್‌ಗಾಗಿ ಕಾಯುತ್ತಿದ್ರು, ಬಸ್ ಇಲ್ಲದೇ ಪರದಾಡುವಂತಾಗಿದೆ. ಬಸ್ ಗಳಿಗಾಗಿ ಕಾದು ಕಾದು ಸುಸ್ತಾದ ವಿದ್ಯಾರ್ಥಿಗಳು. ಬಸ್ ನಿಲ್ದಾಣದಲ್ಲಿ ಕುಳಿತು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಶಿರಾ ನಗರದಿಂದ ತುಮಕೂರಿಗೆ ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು ಹೋಗುತ್ತಾರೆ. ಬೆಳಗ್ಗೆ 6 ಗಂಟೆಯಿಂದಲೇ ಕಾದು ಕುಳಿತರೂ ಬಸ್ ಗಳು ಬರುತ್ತಿಲ್ಲ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ದಿಢೀರ್ ಬಸ್‌ಗಳನ್ನುತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಹಲವು ಬಾರಿ ಬಸ್ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದರೂ ಅವರು ಗಮನಕ್ಕೆ ತೆಗೆದುಕೊಂಡಿಲ್ಲ. ಮುಂಜಾನೆ ಹಾಗೂ ಸಂಜೆಯ ವೇಳೆ ನಿಲ್ದಾಣಾಧಿಕಾರಿಗಳು ಇರೋದಿಲ್ಲ. ಇದರಿಂದ ಯಾರನ್ನು ಕೇಳಬೇಕೆನ್ನುವುದು ತಿಳಿಯುತ್ತಿಲ್ಲ. ಬಸ್ ಬಾರದೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಆಗೋದಿಲ್ಲ. ಇದರಿಂದ ಪಾಠಗಳನ್ನು ಕೇಳಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತ್ತು ಚಿತ್ರದುರ್ಗ ಕಡೆಯಿಂದ ಬರುವ ಬಸ್ ಗಳು ನಗರಕ್ಕೆ ಬರದೆ ಬೈಪಾಸ್ ಮೂಲಕ ಹೋಗುತ್ತವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಮಧ್ಯೆ ಪ್ರವೇಶಿಸಿದ ನಗರ ಪೊಲೀಸರು ಮತ್ತು ಶಿರಾಬಸ್ ಡಿಪೋ ಅಧಿಕಾರಿ ವಿದ್ಯಾರ್ಥಿಗಳ ಮನವೋಲಿಕೆ ಮಾಡಿ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದಿದ್ದಾರೆ.