ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರಿ ವಹಿಸಿಕೊಂಡು ಒಂದು ವರ್ಷವಾಗಲು ಇನ್ನು ಕೆಲವೇ ದಿನ ಬಾಕಿ ಇದೆ. ಈ ಒಂದು ವರ್ಷ ದಲ್ಲಿ ಟ್ರಂಪ್ ಸುಂಕ ಸಮರ ಸೇರಿದಂತೆ ಹಲವಾರು ಪರಿಣಾಮಕಾರಿ ಆದೇಶ ಹೊರಡಿಸುವ ಮೂಲಕ ಭಾರತ ಸೇರಿದಂತೆ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅದರಲ್ಲೂ ವಲಸೆ ನೀತಿ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಟ್ರಂಪ್ ಆಡಳಿತ ಒಂದೇ ವರ್ಷದ ಅವಧಿಯಲ್ಲಿ ಬರೋಬ್ಬರಿ 8000 ವಿದ್ಯಾರ್ಥಿ ಗಳನ್ನು ಸೇರಿಸಿದಂತೆ ಒಟ್ಟು 1 ಲಕ್ಷ ಜನರ ವೀಸಾ ರದ್ದುಗೊಳಿಸಿ ಅಮೆರಿಕದಿಂದ ಗಡೀಪಾರು ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಮಾಹಿತಿ ಹಂಚಿಕೊAಡಿರುವ ಅಮೆರಿಕದ ವಿದೇಶಾಂಗ ಸಚಿವಾಲಯ, 2025ರಲ್ಲಿ ಕ್ರಿಮಿನಲ್ ಹಿನ್ನೆಲೆ ಯುಳ್ಳ 8000ವಿದ್ಯಾರ್ಥಿಗಳು ಮತ್ತು 2,5೦೦ ವಿಶೇಷ ವೀಸಾ ಹೊಂದಿದವರನ್ನು ಸೇರಿ ಒಟ್ಟು 1 ಲಕ್ಷ ಜನರ ವೀಸಾ ರದ್ದುಗೊಳಿಸಲಾಗಿದೆ


