ವಾಷಿಂಗ್ಟನ್ : ಬ್ಲೂ ವೆಲ್ವೆಟ್’ ಮತ್ತು ಮುಲ್ಹೋಲ್ಯಾಂಡ್ ಡ್ರೈವ್ ಚಲನಚಿತ್ರಗಳ ಐಕಾನಿಕ್ ಹಾಲಿವುಡ್ ನಿರ್ದೇಶಕ ಡೇವಿಡ್ ಲಿಂಚ್ (೭೮)ನಿಧನರಾಗಿದ್ದಾರೆ. ಅವರ ಮರಣವು ಸಿನಿಮೀಯ ಪ್ರಪಂಚದ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ.ಅವರು ಸಿನಿಮಾ ರಂಗದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.
ಡೇವಿಡ್ ಲಿಂಚ್ ಕುಟುಂಬ ಗುರುವಾರ ಫೇಸ್‌ಬುಕ್ ಪೋಸ್ಟ್ ಮೂಲಕ ಈ ಸುದ್ದಿ ಪ್ರಕಟಿಸಿದೆ. ಲಿಂಚ್ ನಾಲ್ಕು ಬಾರಿ ವಿವಾಹವಾಗಿದ್ದಾರೆ. ಅವರು ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
2024 ರಲ್ಲಿ ಲಿಂಚ್ ಅವರು ಅತಿಯಾದ ಧೂಮಪಾನದ ಸೇವನೆಯಿಂದ ಎಂಫಿಸೆಮಾದಿಂದ ಬಳಲುತ್ತಿದ್ದಾರೆ ಎಂದು ಅವರ ಕುಟುಂಬಸ್ಥರು ಬಹಿರಂಗಪಡಿಸಿದ್ದಾರೆ. ಡೇವಿಡ್ ಲಿಂಚ್ ಜನವರಿ 20, 1946 ರಂದು ಮೊಂಟಾನಾದ ಮಿಸ್ಸೌಲಾದಲ್ಲಿ ಜನಿಸಿದರು. ಅವರ ತಂದೆ ಕೃಷಿ ಇಲಾಖೆಗೆ ಸಂಶೋಧನಾ ವಿಜ್ಞಾನಿಯಾಗಿದ್ದರು ಅಲೆಮಾರಿ ಕುಟುಂಬವು ಪ್ಲೇನ್ಸ್ ರಾಜ್ಯಗಳು, ಪೆಸಿಫಿಕ್ ವಾಯುವ್ಯ ಮತ್ತು ಆಗ್ನೇಯದಲ್ಲಿ ನೆಲೆಸುವ ಮೊದಲು ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿ ನೆಲೆಸಿದೆ, ಅಲ್ಲಿ ಲಿಂಚ್ ಹೈಸ್ಕೂಲ್ ವ್ಯಾಸಂಗ ಪೂರೈಸಿದ್ದಾರೆ.
ಲಿಂಚ್ ನಾಲ್ಕು ಬಾರಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದಾರೆ ಮತ್ತು ೨೦೨೦ ರಲ್ಲಿ ಜೀವಮಾನದ ಸಾಧನೆಗಾಗಿ ಗೌರವ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಲಿಂಚ್ 1977 ರಲ್ಲಿ ಅವರ ನಿರ್ದೇಶನದ ಚೊಚ್ಚಲ ಚಿತ್ರ ಎರೇಸರ್ ಹೆಡ್ ನೊಂದಿಗೆಹಾಲಿವುಡ್ ಖ್ಯಾತಿಗೆ ಏರಿದರು .ಈ ಕಪ್ಪು -ಬಿಳುಪು ಚಿತ್ರದಲ್ಲಿ ಜ್ಯಾಕ್ ನಾನ್ಸ್, ಚಾರ್ಲೊಟ್ ಸ್ಟೀವರ್ಟ್ ಮತ್ತು ಜೀನ್ ಬೇಟ್ಸ್ ನಟಿಸಿದ್ದಾರೆ.
ಅವರ ಸ್ಪಷ್ಟವಾದ ಚಿತ್ರೀಕರಣದ ಶೈಲಿಯು ಹಾಲಿವುಡ್‌ನ ನಿರ್ಮಾಪಕರ ಗಮನವನ್ನು ಸೆಳೆದಿದೆ. ಅವರ ಕೌಶಲ್ಯವನ್ನು ನೋಡಿದ ಮೆಲ್ ಬ್ರೂಕ್ಸ್ ಪ್ರೊಡಕ್ಷನ್ಸ್ ಡೇವಿಡ್‌ಗೆ ದಿ ಎಲಿಫೆಂಟ್ ಮ್ಯಾನ್ ಬರೆಯಲು ಮತ್ತು ನಿರ್ದೇಶಿಸಲು ಅವಕಾಶವನ್ನು ನೀಡಿದೆ.ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ.
ಇದು ಎಂಟು ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಗೆದ್ದುಕೊಂಡಿದೆ, ಇದರಲ್ಲಿ ಲಿಂಚ್ ಅವರ ಅತ್ಯುತ್ತಮ ನಿರ್ದೇಶಕನ ಮೊದಲ ನಾಮನಿರ್ದೇಶನವೂ ಸೇರಿದೆ. ಅವರ ನಿಧನಕ್ಕೆ ಹಾಲಿವುಡ್ ತಾರೆಯರಾದ ರಾನ್ ಹೊವಾರ್ಡ್,ಸ್ಟಿಂಗ್, ಜುಡ್ ಅಪಾಟೋವ್ ಅವರುನ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಸಿನಿಮಾ ಮತ್ತು ದೂರದರ್ಶನ ಎರಡರಲ್ಲೂ ತನ್ನ ಕೆಲಸಕ್ಕಾಗಿ ಹೆಸರುವಾಸಿಯಾದ ಲಿಂಚ್, ತನ್ನ ವಿಶಿಷ್ಟ ಕಲಾತ್ಮಕ ಶೈಲಿ ವಿವಿಧ ಅಂಶಗಳನ್ನು ಸAಯೋಜಿಸುವ ಮೂಲಕ ಉದ್ಯಮದ ಮೇಲೆ ಆಳವಾದ ಪ್ರಭಾವವನ್ನು ಬೀರಿದ್ದಾರೆ.