ವಾಷಿಂಗ್ಟನ್ : ಹಮಾಸ್ ಬಂಡುಕೋರರ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಬಂಧಿಸಿದ್ದು ಆತನನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಯೆಹೂದ್ಯ ವಿರೋಧಿತ್ವವನ್ನು ಹರಡಿದ ಮತ್ತು ಹಮಾಸ್ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್ ಆಡಳಿತ ಭಾರತೀಯ ಪ್ರಜೆ ಮತ್ತು ಪೋಸ್ಟ್ಡಾಕ್ಟರಲ್ ಫೆಲೋ ಬದರ್ ಖಾನ್ ಸೂರಿ ಅವರನ್ನು ಬಂಧಿಸಿದೆ.
ಸೂರಿ ಅವರ ಪತ್ನಿಯ ಪ್ಯಾಲೆಸ್ಟೀನಿ ಯನ್ ಮೂಲದ ಕಾರಣದಿಂದಾಗಿ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರ ಅರ್ಜಿಯಲ್ಲಿ ತಿಳಿಸಲಾಗಿದೆ.
ಯೆಹೂದ್ಯ ವಿರೋಧಿತ್ವ ಹರಡಿದ ಮತ್ತು ಪ್ಯಾಲೆಸ್ಟೀನಿಯನ್ ಭಯೋತ್ಪಾದಕ ಗುಂಪು ಹಮಾಸ್ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್ ಆಡಳಿ ಖಾನ್ ಸೂರಿ ಅವರನ್ನು ಬಂಧಿಸಿದೆ ಎಂದು ಅಮೇರಿಕಾದ ಡಿಪಾರ್ಟ್ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ತಿಳಿಸಿದೆ.
ವಾಷಿಂಗ್ಟನ್ ಡಿಸಿಯ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಸಂಶೋಧಕ ಸೂರಿ ಅವರನ್ನು ರಾತ್ರಿ ವರ್ಜೀನಿಯಾದಲ್ಲಿರುವ ಅವರ ಮನೆಯ ಹೊರಗೆ ಫೆಡರಲ್ ಏಜೆಂಟ್‌ಗಳು ವಶಕ್ಕೆ ತೆಗೆದುಕೊಂಡರು, ಅವರ ವೀಸಾ ರದ್ದುಗೊಳ್ಳುತ್ತಿದೆ ಎಂದು ತಿಳಿಸಲಾಗಿದೆ.
ಅಮೆರಿಕದ ಪ್ರಜೆಯನ್ನು ಮದುವೆ ಯಾಗಿರುವ ಸೂರಿ, ವಲಸೆ ನ್ಯಾಯಾ ಲಯದಲ್ಲಿ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಸೂರಿ ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿಯ ಪ್ರಕಾರ, ಡೊನಾಲ್ಡ್ ಟ್ರಂಪ್ ಆಡಳಿತ ವಲಸೆ ಕಾನೂನಿನ ಅಪರೂಪವಾಗಿ ಬಳಸಲಾಗುವ ವಿಭಾಗವನ್ನು ಬಳಸಿದೆ, ಅಮೆರಿಕದ ವಿದೇಶಾಂಗ ನೀತಿಗೆ ಬೆದರಿಕೆ ಎಂದು ಪರಿಗಣಿಸಲಾದ ನಾಗರಿಕರಲ್ಲದವರನ್ನು ಗಡಿಪಾರು ಮಾಡುವ ಅಧಿಕಾರ ವಿದೇಶಾಂಗ ಕಾರ್ಯದರ್ಶಿಗೆ ನೀಡಿದೆ.
ಜಾಮಿಯಾ ಮಿಲಿಯಾ ಇಸ್ಲಾಮಿ ಯಾದ ಮಾಜಿ ವಿದ್ಯಾರ್ಥಿ ಸೂರಿ, “ದಕ್ಷಿಣ ಏಷ್ಯಾದಲ್ಲಿ ಬಹುಸಂಖ್ಯಾತತೆ ಮತ್ತು ಅಲ್ಪಸಂಖ್ಯಾತ ಹಕ್ಕುಗಳು” ಎಂಬ ಬೋಧನೆ ಮಾಡುತ್ತಿದ್ದರು ಮತ್ತು ಜಾರ್ಜ್ಟೌನ್ ವಿಶ್ವವಿದ್ಯಾಲಯದ ವೆಬ್‌ಸೈಟ್ ಪ್ರಕಾರ ಭಾರತದಿಂದ ಶಾಂತಿ ಮತ್ತು ಸಂಘರ್ಷ ಅಧ್ಯಯನದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು.