Monday, March 3, 2025
Flats for sale
Homeವಿದೇಶವಾಷಿಂಗ್ಟನ್ : ಶ್ವೇತಭವನದಲ್ಲಿ ಟ್ರಂಪ್-ಝುಲೆನ್ಸ್ಕಿ ಜಟಾಪಟಿ,ಮೂರನೇ ಮಹಾಯುದ್ಧದ ಬಗ್ಗೆ ಎಚ್ಚರಿಸಿದ ಡೊನಾಲ್ಡ್ ಟ್ರಂಪ್..!

ವಾಷಿಂಗ್ಟನ್ : ಶ್ವೇತಭವನದಲ್ಲಿ ಟ್ರಂಪ್-ಝುಲೆನ್ಸ್ಕಿ ಜಟಾಪಟಿ,ಮೂರನೇ ಮಹಾಯುದ್ಧದ ಬಗ್ಗೆ ಎಚ್ಚರಿಸಿದ ಡೊನಾಲ್ಡ್ ಟ್ರಂಪ್..!

ವಾಷಿಂಗ್ಟನ್ : ಜಗತ್ತಿನ ಮೂರನೇ ಮಹಾಯುದ್ಧದೊಂದಿಗೆ ಜೂಜಾಡುತ್ತಿದ್ದೀರಿ ಎಚ್ಚರವಿರಲಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝುಲೆನ್ಸ್ಕಿ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಮಾತುಕತೆ ವೇಳೆ ಉಭಯ ನಾಯಕರ ನಡುವೆ ಜಟಾಪಟಿ ನಡೆದು, ಝುಲೆನ್ಸ್ಕಿ ಶ್ವೇತಭವನದಿಂದ ಹೊರ ನಡೆದ ಪ್ರಸಂಗವೂ ನಡೆಯಿತು. ರಷ್ಯಾಉಕ್ರೇನ್ ನಡುವಣ ಯುದ್ಧ ಅಂತ್ಯಗೊಳಿಸಲು ಉಭಯ ನಾಯಕರು ಭೇಟಿಯಾಗಿದ್ದರು. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದ ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನದ ಭಾಗವಾಗಿ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝುಲೆನ್ಸ್ಕಿ ಭೇಟಿ ಮಾಡಿ ಮಾತುಕತೆ ನಡೆಸಿದ ವೇಳೆ ವ್ಯಕ್ತವಾದ ಭಿನ್ನಾಭಿಪ್ರಾಯದ ವೇಳೆ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.

ರಷ್ಯಾದ ಆಕ್ರಮಣದಿಂದ ಉಕ್ರೇನ್ ರಕ್ಷಣೆ ಮಾಡಲು ಅಮೆರಿಕಾ ಬಲವಾದ ನಿಲುವು ತೆಗೆದುಕೊಳ್ಳಬೇಕು ಎನ್ನುವ ಝುಲೆನ್ಸ್ಕಿಅವರ ವಾದಕ್ಕೆ ತೀಷ್ಣವಾಗಿ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವಾನ್ಸ್ ಅವರಯ ಅಮೆರಿಕಾದ ಭದ್ರತಾ ಖಾತರಿ ಬಯಸುತ್ತಿರುವುದು ಸರಿಯಲ್ಲ. ಉಭಯ ದೇಶಗಳು ಪರಸ್ಪರ ಮಾತುಕತೆ ಮೂಲಕ ಯುದ್ದದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ. ಉಕ್ರೇನ್ ಅಧ್ಯಕ್ಷರು ಮುಂದಿಟ್ಟಿರುವ ಪ್ರಸ್ತಾಪ ಮತ್ತು ಬೇಡಿಕೆಗಳು ಅಗೌgವದಿಂದ ಕೂಡಿದ್ದು ನೀವು ಮೂರನೇ ಮಹಾಯುದ್ದದೊಂದಿಗೆ ಜೂಜಾಟ ಆಡುತ್ತಿದ್ದೀರಾ ಅದನ್ನು ನಿಲ್ಲಿಸಿ, ನೀವು ಹೆಚ್ಚು ಕೃತಜ್ಞರಾಗಿರಬೇಕು ಎಂದು ತಿಳಿಸಿದ್ದಾರೆ.

ಉಕ್ರೇನ್ ಬಗ್ಗೆ ಆಡಳಿತದಲ್ಲಿ ಅತ್ಯಂತ ಸಂಶಯಾಸ್ಪದ ಧ್ವನಿಗಳಲ್ಲಿ ಒಂದಾದ ಜೆಡಿ ಉಪಾಧ್ಯಕ್ಷ ವ್ಯಾನ್ಸ್, ಓವಲ್ ಕಚೇರಿಯಲ್ಲಿ ಟ್ರಂಪ್ ಅವರ ಬಗ್ಗೆ ಅಮೆರಿಕದ ಮಾಧ್ಯಮಗಳ ಮುಂದೆ ಚರ್ಚಿಸಿದ್ದಕ್ಕಾಗಿ ಝುಲೆನ್ಸ್ಕಿ ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವೊಲೋಡಿಮಿರ್ ಝುಲೆನ್ಸ್ಕಿ ತನ್ನ ದೇಶದ ಅಮೂಲ್ಯ ಖನಿಜಗಳಲ್ಲಿ ಅಮೆರಿಕಕ್ಕೆ ಆಸಕ್ತಿ ನೀಡುವ ಒಪ್ಪಂದವನ್ನು ತಲುಪಲು ಮತ್ತು ಅಮೆರಿಕದ ನಾಯಕನ ನಿಯಮಗಳ ಮೇಲೆ ಯುದ್ಧಕ್ಕೆ ರಾಜತಾಂತ್ರಿಕ ನಿರ್ಣಯದತ್ತ ಅವರನ್ನು ತಳ್ಳಲು ವೊಲೋಡಿಮಿರ್ ಝುಲೆನ್ಸ್ಕಿ ಯನ್ನು ಒತ್ತಾಯಿಸಲುಟ್ರಂಪ್ ತಮ್ಮ ಪ್ರಯತ್ನಗಳನ್ನು ಬಹಿರಂಗಪಡಿಸಿದ್ದಾರೆ.

ಉಕ್ರೇನಿ ಸೈನಿಕರು ನಂಬಲಾಗದಷ್ಟು ಧೈರ್ಯಶಾಲಿಗಳು ಮತ್ತು ಅವರ ಎರಡು ದೇಶಗಳ ನಡುವೆ ಆರ್ಥಿಕ ಒಪ್ಪಂದದ ಬಗ್ಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಮೂರನೇ ಜಾಗತಿಕ ಯುದ್ಧ ನಡೆಯದಂತೆ ನೋಡಿಕೊಳ್ಳಬೇಕು ಇದಕ್ಕೆ ಉಕ್ರೇನ್ ಅಧ್ಯಕ್ಷರ ಸಹಕಾರ ಅಗತ್ಯ ಎಂದಿದ್ದಾರೆ. ಬೆಚ್ಚಿ ಬಿದ್ದ ವಿಶ್ವ ನಾಯಕರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝುಲೆನ್ಸ್ಕಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಾತುಕತೆಯ ವೇಳೆ ಭಿನ್ನಾಭಿಪ್ರಾಯ ಮತ್ತು ಉದ್ವಿಘ್ನತೆ ಉಂಟಾಗಿದ್ದು,ಜಾಗತಿಕ ನಾಯಕರನ್ನು ಬೆಚ್ಚಿ ಬೀಳಿಸಿದೆ.

ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝುಲೆನ್ಸ್ಕಿ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆಯ ವೇಳೆ ಉಂಟಾದ ವೈಮನಸ್ಯ ಭಿನ್ನಾಭಿಪ್ರಾಯ ಜಾಗತಿಕ ನಾಯಕರ ವಿರೋಧಕ್ಕೂ ಕಾರಣವಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಮೇಲೆ ಕೇಂದ್ರೀಕೃತವಾದ ಮಾತುಕತೆಯ ವಿನಿಮಯದಲ್ಲಿ ಡೊನಾಲ್ಡ್ ಟ್ರಂಪ್ ರಷ್ಯಾ ಮತ್ತು ಮಿಲಿಟರಿ ನೆರವಿನ ಬಗ್ಗೆ ತಮ್ಮ ವಿವಾದಾತ್ಮಕ ನಿಲುವು ಸಮರ್ಥಿಸಿಕೊಂಡರು, ಇದಕ್ಕೆ ವೊಲೋಡಿಮಿರ್ ಝೆಲೆನ್ಸಿತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಉಕ್ರೇನ್‌ಗೆ ನಿರಂತರ ಬೆಂಬಲ ಮತ್ತು ಶಾಂತಿಯ ಅಗತ್ಯವನ್ನು ಒತ್ತಿ ಹೇಳಿದ್ಧಾರೆ.

ಈ ನಡುವೆ ಪ್ರತಿಕ್ರಿಯಿಸಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, “ರಷ್ಯಾ ಆಕ್ರಮಣಕಾರಿ ಪ್ರವೃತ್ತಿ ಬೆಳಸಿಕೊಂಡಿದೆ, ಮೂರು ವರ್ಷಗಳ ಹಿಂದೆ ಉಕ್ರೇನ್‌ಗೆ ಸಹಾಯ ಮಾಡಲು ಮತ್ತು ರಷ್ಯಾಕ್ಕೆ ನಿರ್ಬಂಧ ಹೇರಲು ನಾವೆಲ್ಲರೂ ಜೊತೆಯಾಗಿದ್ದೇವೆ. ಸರಿಯಾಗಿದ್ದೇವೆ. ಅಮೆರಿಕ ಯುರೋಪಿಯನ್ನರು, ಕೆನಡಿಯನ್ನರು, ಜಪಾನಿಯರು ಮತ್ತು ಇನ್ನೂ ಅನೇಕರು ನಮ್ಮ ಜೊತೆ ನಿಂತಿದ್ದಾರೆ ಎಂದಿದ್ದಾರೆ

ಆರಂಭದಿಂದಲೂ ಹೋರಾಡುತ್ತಿರು ವವರಿಗೆ ಸಹಾಯ ಮಾಡಿದ ಮತ್ತು ಗೌರವಿಸಿದ ಎಲ್ಲರಿಗೂ ನಾವು ಧನ್ಯವಾದ ಹೇಳಬೇಕು. ಏಕೆಂದರೆ ಅವರು ಘನತೆ, ಸ್ವಾತಂತ್ರ÷್ಯ, ಮಕ್ಕಳು ಮತ್ತು ಯುರೋಪಿನ ಭದ್ರತೆಗಾಗಿ ಹೋರಾಡುತ್ತಿದ್ದಾರೆ.ಸರಳ ವಿಷಯಗಳು, ಆದರೆ ಇಂತಹ ಸಮಯದಲ್ಲಿ ಅವುಗಳನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು, ಅಷ್ಟೇ,’’ ಎಂದು ಅವರು ಹೇಳಿದ್ದಾರೆ.

ಇಟಾಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ: “ಪಶ್ಚಿಮದ ಪ್ರತಿಯೊಂದು ದೇಶವನ್ನು ದುರ್ಬಲಗೊಳಿಸುತ್ತದೆ ಮತ್ತು ನಮ್ಮ ನಾಗರಿಕತೆಯ ಅವನತಿಯನ್ನು ನೋಡಲು ಬಯಸುವವರಿಗೆ ಅನುಕೂಲಕರವಾಗಿದೆ. ಶಕ್ತಿ ಅಥವಾ ಪ್ರಭಾವದ ಬಗ್ಗೆ ಅಲ್ಲ, ಆದರೆ ಅದನ್ನು ಸ್ಥಾಪಿಸಿದ ತತ್ವಗಳ ಬಗ್ಗೆ, ಮೊದಲನೆಯದಾಗಿ ಸ್ವಾತಂತ್ರ÷್ಯದ ಬಗ್ಗೆ. ಒಂದು ವಿಭಜನೆಯು ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.

ಅಮೇರಿಕಾ ಮತ್ತು ಯುರೋಪಿಯನ್ ರಾಜ್ಯಗಳು ಮತ್ತು ಮಿತ್ರರಾಷ್ಟçಗಳ ನಡುವೆ ತಕ್ಷಣದ ಶೃಂಗಸಭೆಯ ಅಗತ್ಯವಿದೆ, ಇತ್ತೀಚಿನ ವರ್ಷಗಳಲ್ಲಿ ಒಟ್ಟಾಗಿ ಸಮರ್ಥಿಸಿಕೊಂಡಿರುವ ಉಕ್ರೇನ್‌ನಿಂದ ಪ್ರಾರAಭಿಸಿ, ಮತ್ತು ಭವಿಷ್ಯದಲ್ಲಿ ಎದುರಿಸಬೇಕಾದ ಸವಾಲುಗಳು. ಮುಂಬರುವ ಗಂಟೆಗಳಲ್ಲಿ ಇಟಲಿ ತನ್ನ ಪಾಲುದಾರರಿಗೆ ಮಾಡಲು ಉದ್ದೇಶಿಸಿರುವ ಪ್ರಸ್ತಾಪ ಇದಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular