ವಾಷಿಂಗ್ಟನ್ : ವಿದೇಶಿ ಉದ್ಯೋಗಿಗಳ ವಲಸೆ ಹತ್ತಿಕ್ಕುವ ಪ್ರಯತ್ನವಾಗಿ ಅಮೆರಿಕನ್ ಕಂಪನಿಗಳು ಎಚ್1ಬಿ ವೀಸಾಕ್ಕೆ ಪಾವತಿಸುವ ವಾರ್ಷಿಕ ಶುಲ್ಕವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಈಗ ಒಂದು ಲಕ್ಷ ಡಾಲರ್‌ಗೇರಿಸಿದೆ. ಇದು ಈ ಹಿಂದೆ 45೦೦ ಡಾಲರ್ ಇತ್ತು. ತತ್ಪರಿಣಾಮ ಸುಮಾರು 4 ಲಕ್ಷ ರೂ. ಇದ್ದ ಎಚ್1ಬಿ ವೀಸಾ ಶುಲ್ಕ ಈಗ ಒಮ್ಮಿಂದೊಮ್ಮೆಲೇ 88 ಲಕ್ಷಕ್ಕೆ ಏರಿಕೆಯಾಗಿದೆ.
ಸೆಪ್ಟಂಬರ್ 21ರಿಂದ ಜಾರಿಗೆ ಬರಲಿರುವ ಈ ಆದೇಶದಿಂದ ಭಾರತ ಹಾಗೂ ಚೀನಾದ ನುರಿತ ಉದ್ಯೋಗಿ ಗಳನ್ನು ಅವಲಂಬಿಸಿರುವ ತAತ್ರಜ್ಞಾನ ವಲಯದ ಅಮೆರಿಕ ಕಂಪನಿಗಳಿಗೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ. ಈ ಆದೇಶ 12 ತಿಂಗಳವರೆಗೆ ಜಾರಿಯಲ್ಲಿರುವು ದಾದರೂ ಅಮೆರಿಕದ ಖಜಾನೆಗೆ 100 ಶತಕೋಟಿ ಡಾಲರ್ ಸಂಗ್ರಹವಾಗುವುದನ್ನು ಟ್ರಂಪ್ ಆಡಳಿತ ನಿರೀಕ್ಷಿಸಿದೆ.
ಭಾರತವು ಈ ವೀಸಾದ ಅತಿದೊಡ್ಡ ಫಲಾನುಭವಿಯಾಗಿದ್ದು ಕಳೆದ ವರ್ಷ ಈ ವೀಸಾ ಪಡೆದವರಲ್ಲಿ ಶೇ.71 ಮಂದಿ ಭಾರತೀಯರು. ಚೀನಿಯರಲ್ಲಿ 11% ಮಂದಿಗೆ ಈ ವೀಸಾ ದೊರಕಿತ್ತು. ವಿದೇಶದಲ್ಲಿರುವ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆತರುವುದಕ್ಕಾಗಿ ಅಮೆರಿಕನ್ ಕಂಪನಿಗಳು ಎಚ್1-ಬಿ ವಲಸೆರಹಿತ ವೀಸಾ ಪಡೆಯಲು ಸರ್ಕಾರಕ್ಕೆ ಇದುವರೆಗೆ 1,5೦೦ ಡಾಲರ್‌ಗಳಷ್ಟು ಆಡಳಿತಾತ್ಮಕ ಶುಲ್ಕ ಪಾವತಿಸುತ್ತಿದ್ದವು
ಅಮೆರಿಕಕ್ಕೆ ವಿದೇಶದಿಂದ ಕರೆತರುವ ಕೆಲಸಗಾರರು ಅತ್ಯಂತ ಹೆಚ್ಚು ಕೌಶಲ್ಯಪೂರ್ಣರು. ಅವರಿಂದಾಗಿ ಅಮೆರಿಕ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಬಾರದೆAಬ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ. ಆದರೂ ಉತ್ತಮ ಕೆಲಸಗಾರರನ್ನು ಅನ್ಯ ದೇಶದಿಂದ ಕರೆತರುವುದಕ್ಕೆ ಆಕ್ಷೇಪ ಇಲ್ಲ. ಪ್ರಸ್ತುತ ಅಮೆರಿಕದಲ್ಲಿ ಜಾರಿಯಲ್ಲಿರುವ ಎಚ್1ಬಿ ವಲಸೆಯೇತರ ವೀಸಾ ಕಾರ್ಯಕ್ರಮ ಅತ್ಯಂತ ಹೆಚ್ಚು ದುರುಪಯೋಗವಾದ ವ್ಯವಸ್ಥೆಗಳಲ್ಲೊಂದಾಗಿದೆ. ಅಮೆರಿಕನ್ ಉದ್ಯೋಗಿಗಳ ಕೆಲಸ ಉಳಿಸುವುದಕ್ಕಾಗಿ ಈ ರೀತಿ ವಲಸೆ ವೀಸಾ ಶುಲ್ಕ ಹೆಚ್ಚಿಸಲಾಗಿದೆ ಎಂದು ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿ ವಿಲ್ ಸ್ಕಾರ್ಪ್ ತಿಳಿಸಿದ್ದಾರೆ.
ಕಾನೂನು ಸವಾಲು ಸಂಭವ : ಅದೇನಿದ್ದರೂ ಈ ವೀಸಾ ಶುಲ್ಕ ಹೇರುವ ಟ್ರಂಪ್ ನಿರ್ಧಾರ ಕಾನೂನು ಸವಾಲುಗಳನ್ನು ಎದುರಿಸುವ ಸಾಧ್ಯತೆ ಇದೆ. ಈ ನೀತಿಯ ಕಾನೂನುಬದ್ಧತೆಯನ್ನು ಈಗಾಗಲೇ ಮಾಜಿ ಅಧ್ಯಕ್ಷ ಜೊ ಬೈಡನ್ ಅವರ ಆಡಳಿತ ಕಾಲದಲ್ಲಿ ಪೌರತ್ವ ಹಾಗೂ ವಲಸೆ ಇಲಾಖೆಯ ಅಧಿಕಾರಿಯಾಗಿದ್ದ ಡೌಗ್ ರಾಂಡ್ ಪ್ರಶ್ನಿಸಿದ್ದಾರೆ. ಈ ಶುಲ್ಕ ನೀತಿ ನ್ಯಾಯಾಲಯದಲ್ಲಿ ಐದು ಸೆಕೆಂಡುಗಳ ಕಾಲವೂ ಉಳಿಯುವ ಸಾಧ್ಯತೆ ಇಲ್ಲ. ಇದು ಜನರಿಂದ ರಕ್ಷಣೆಗೆ ಹಣ ಬೇಡುವ ರೀತಿಯಲ್ಲಿದೆ. ದೇಶದ ಕಾನೂನುಗಳನ್ನು ನಿರ್ವಹಿಸುವ ಪರಿ ಇದಲ್ಲ ಎಂದೂ ಟೀಕಿಸಿದ್ದಾರೆ.
ಎಚ್1 ಬಿ ವೀಸಾ ಎಂದರೇನು?
ಇದೊAದು ಅಮೆರಿಕದಲ್ಲಿ ಕೆಲಸ ಮಾಡುವ ವಿಶೇಷ ಕೌಶಲ್ಯ ಇರುವ ವಿದೇಶಿಯರಿಗೆ ನೀಡುವ ತಾತ್ಕಾಲಿಕ ವೀಸಾ ಆಗಿದ್ದು 1990 ರಲ್ಲಿ ಈ ವೀಸಾ ನೀತಿ ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು. ಆರಂಭದಲ್ಲಿ ಮೂರು ವರ್ಷಗಳವರೆಗೆ ಇಂಥ ವೀಸಾ ನೀಡುವುದಾದರೂ ಗರಿಷ್ಠ ಆರು ವರ್ಷಗಳವರೆಗೆ ವಿಸ್ತರಿಸುವುದಕ್ಕೂ ಅವಕಾಶವಿದೆ. ಈ ವೀಸಾಕ್ಕೆ ಅನುಮೋದನೆ ಪಡೆದ ನಂತರ ಅಮೆರಿಕ ಉದ್ಯೋಗಿಗಷ್ಟೇ ವೇತನ ಹಾಗೂ ಕಾರ್ಯ ನೀಡಲಾಗುತ್ತದೆ.