ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ನಡುವೆಯೆ ಅಮೆರಿಕಾ ಮಾಜಿ ಅಧ್ಯಕ್ಷ ಹಾಗು ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಮೂರನೇ ಬಾರಿಗೆ ಕೊಲೆ ಯತ್ನ ನಡೆದಿದೆ.
ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಆಗುಂತಕನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಕೋಚೆಲ್ಲಾ ಪ್ರಚಾರ ಸಭೆಯಲ್ಲಿ ಈ ದಾಳಿ ನಡೆಸಲಾಗಿದೆ. ಆಗುಂತಕ ನಕಲಿ ಪತ್ರಕರ್ತರ ಗುರುತಿನ ಚೀಟಿ ಮತ್ತು ನಕಲಿ ಪಾಸ್‌ಗಳೊಂದಿಗೆ ಶಸ್ತçಸಜ್ಜಿತ ವ್ಯಕ್ತಿಯನ್ನು ಕೊನೆಯ ಕ್ಷಣದಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ರ‍್ಯಾಲಿ ಸ್ಥಳದಿಂದ ಸುಮಾರು ಒಂದು ಮೈಲಿ ದೂರದಲ್ಲಿ ಆರೋಪಿಯು ನಕಲಿ ಪ್ರವೇಶ ಪಾಸ್‌ನೊಂದಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗುಂತಕನ ಬಳಿ ತುಂಬಿದ ಶಾಟ್‌ಗನ್, ಕೈಬಂದೂಕು ಮತ್ತು ಹೆಚ್ಚಿನ ಸಾಮರ್ಥ್ಯದ ಮ್ಯಾಗಜೀನ್ ಅನ್ನು ಸಹ ಪತ್ತೆಯಾಗಿವೆ ಬಹುಶಃ ಮತ್ತೊಂದು ಹತ್ಯೆಯ ಪ್ರಯತ್ನ ತಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ಆರೋಪಿಯನ್ನು ವೆಮ್ ಮಿಲ್ಲರ್ ಎಂದು ಗುರುತಿಸಲಾಗಿದ್ದು,ಆತ ನಕಲಿ ಪ್ರೆಸ್ ಕಾರ್ಡ್ ಮತ್ತು ಪ್ರವೇಶ ಪಾಸ್ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಬಲಪಂಥೀಯ ಸರ್ಕಾರಿ ವಿರೋಧಿ ಸಂಘಟನೆಯ ಸದಸ್ಯ ಎಂದು ನಂಬಲಾಗಿದೆ ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ
ನೀಡಿದ್ದಾರೆ.
ಮಿಲ್ಲರ್ ಬಲಪಂಥೀಯ ವಿರೋಧಿ ಸರ್ಕಾರಿ ಸಂಘಟನೆಯ ಸದಸ್ಯ ಎಂದು ನಂಬಲಾಗಿದೆ. ಲಾಸ್
ವೇಗಾಸ್‌ನ ೪೯ ವರ್ಷದ ನಿವಾಸಿ, ಮಿಲ್ಲರ್ ಕಪುö್ಪ ಎಸ್‌ಯುವಿ ಚಾಲನೆ ಮಾಡುವ ಚೆಕ್‌ಪಾಯಿಂಟ್‌ನಲ್ಲಿ ಬಂದಿಸ ಲಯಿತು. ಡೋನಾಲ್ಡ್ ಟ್ರಂಪ್ ಅವರ ಜೀವಕ್ಕೆ ಎರಡು ಬಾರಿ ಪ್ರಯತ್ನಗಳು ನಡೆದಿವೆ ಮತ್ತು ಕೋಚೆಲ್ಲಾ ರ್ಯಾಲಿಯಲ್ಲಿ ಟ್ರಂಪ್ ಬುಲೆಟ್ ಪ್ರೂಫ್ ಗಾಜಿನ ಹಿಂದಿನಿಂದ ಮಾತನಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಿಲ್ಲರ್ ತನ್ನನ್ನು ತಾನು ಸಾರ್ವಭೌಮ ಪ್ರಜೆ ಎಂದು ಹೇಳಿಕೊAಡಿದ್ದಾನೆ. ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಆ ಬಳಿಕ ಹೆಚ್ಚಿನ ಮಾಹಿತಿ ಕಲೆ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.