Friday, January 16, 2026
Flats for sale
Homeವಿದೇಶವಾಷಿಂಗ್ಟನ್ : ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉನ್ನತಮಟ್ಟದ ಸಭೆ.

ವಾಷಿಂಗ್ಟನ್ : ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉನ್ನತಮಟ್ಟದ ಸಭೆ.

ವಾಷಿಂಗ್ಟನ್ : ಸೇನಾ ಕಾರ್ಯಾಚರಣೆ ನಡೆಸಿಯಾದರೂ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಮಾರ್ಗೋಪಾಯಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ನಡೆಸಿದ ಉನ್ನತ ಸಭೆಯೊಂದರಲ್ಲಿ ಚರ್ಚೆ ನಡೆಸಿದ್ದಾರೆಂದು ಶ್ವೇತಭವನದ ವರದಿಗಳು ಹೇಳಿವೆ.

ರಾಷ್ಟ್ರೀಯ ಭದ್ರತೆಯ ಆದ್ಯತೆ’ ಹಿನ್ನೆಲೆಯಲ್ಲಿ ನ್ಯಾಟೋ ಸದಸ್ಯ ರಾಷ್ಟç ಡೆನ್ಮಾರ್ಕ್ಗೆ ಸೇರಿದ ಅರೆ ಸ್ವಾಯುತ್ತ ಪ್ರದೇಶ ಗ್ರೀನ್‌ಲ್ಯಾಂಡನ್ನು ವಶಪಡಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು ಎಂದು ಸುದ್ದಿಸಂಸ್ಥೆಯೊAದಕ್ಕೆ ತಿಳಿಸಲಾಗಿದೆ. ಡೆನ್ಮಾರ್ಕ್ಗೆ ಬೆಂಬಲವಾಗಿ ಮತ್ತು ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಅಮೆರಿಕ ಪ್ರಯತ್ನ ವಿರೋಧಿಸಿ ಯೂರೋಪಿಯನ್ ನಾಯಕರು ಜಂಟಿ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಶ್ವೇತಭವನದಿಂದ ಈ ಹೇಳಿಕೆ ಹೊರಬಿದ್ದಿದೆ.

`ಅಮೆರಿಕದ ವಿದೇಶಾಂಗ ನೀತಿಯ ಬಹುಮುಖ್ಯ ಆದ್ಯತೆಯಾಗಿರುವ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಆಯ್ಕೆಗಳ ಕುರಿತು ಅಧ್ಯಕ್ಷ ಟ್ರಂಪ್ ಹಾಗೂ ಅವರ ತಂಡ ಚರ್ಚಿಸಿದೆ. ಈ ಗುರಿ ಸಾಧಿಸಲು ಬಹುಷಃ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳುವ ಆಯ್ಕೆಯೂ ಮುಖ್ಯ ಕಮಾಂಡರ್ ಕೈಯಲ್ಲೇ ಇದೆ’ ಎಂದು ಶ್ವೇತ ಭವನ ಹೇಳಿಕೆ ನೀಡಿದೆ. ಕೆಲ ದಿನಗಳ ಹಿಂದಷ್ಟೇ ಗ್ರೀನ್‌ಲ್ಯಾಂಡ್ ವಶಕ್ಕೆ ಸಂಬAಧಿಸಿದ ಅಮೆರಿಕದ ಯಾವುದೇ ಬೆದರಿಕೆಗಳಿಗೂ ನಾವು ಬಗ್ಗಲ್ಲ ಎಂದು ಡೆನ್ಮಾರ್ಕ್ ಪ್ರಧಾನಿ ಹೇಳಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular