Tuesday, July 21, 2026
Homeವಿದೇಶವಾಷಿಂಗ್ಟನ್ : ಏರ್ ಇಂಡಿಯಾ ವಿಮಾನಕ್ಕೆ ಖಲಿಸ್ತಾನ ಭಯೋತ್ಪಾದಕ ಪನ್ನುವಿನಿಂದ ಬಾಂಬ್ ಬೆದರಿಕೆ..!

ವಾಷಿಂಗ್ಟನ್ : ಏರ್ ಇಂಡಿಯಾ ವಿಮಾನಕ್ಕೆ ಖಲಿಸ್ತಾನ ಭಯೋತ್ಪಾದಕ ಪನ್ನುವಿನಿಂದ ಬಾಂಬ್ ಬೆದರಿಕೆ..!

ವಾಷಿಂಗ್ಟನ್ : ಸಿಖ್ ಹತ್ಯಾಕಾಂಡದ ೪೦ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನಗಳ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನ ಭಯೋತ್ಪಾದಕ ಗುರಪತ್ವಂತ್ ಸಿಂಗ್ ಪನ್ನುಬೆದರಿಕೆ ಹಾಕಿದ್ದಾನೆ.

ನವೆಂಬರ್ ಒಂದರಿಂದ ೧೯ ರವರೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆಯೂ
ಆತ ಎಚ್ಚರಿಕೆ ನೀಡಿದ್ದಾನೆ. ಸಿಖ್ ಫಾರ್ ಜಸ್ಟೀಸ್(ಎಸ್‌ಎಫ್‌ಜೆ) ಸಂಸ್ಥಾಪಕನಾಗಿರುವ ಆತ ಅಮೆರಿಕದಲ್ಲಿ ವಾಸಿಸುತ್ತಿದ್ದಾನೆ. ಭಾರತದ ಗೃಹ ಸಚಿವಾಲಯವು ೨೦೨೦ರಲ್ಲಿ ಆತನನ್ನು ಭಯೋತ್ಪಾದಕನೆಂದು ಘೋಷಿಸಿದೆ. ಆತ ಸ್ಥಾಪಿಸಿರುವ ಎಸ್‌ಎಫ್‌ಜೆ ದೇಶವಿರೋಧಿ ಸಂಘಟನೆ
ಎಂದು ಭಾರತ ಸರ್ಕಾರ ವರ್ಷದ ಹಿಂದೆ ಘೋಷಿಸಲಾಗಿದೆ. ಇದೇ ವರ್ಷದ ಗಣರಾಜ್ಯೋತ್ಸವ ದಿನದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.

RELATED ARTICLES

LEAVE A REPLY

Please enter your comment!
Please enter your name here

Most Popular